Childhood is the foundation of life. 
ರಾಜ್ಯ

ಬಾಲ್ಯವೇ ಬದುಕಿನ ಅಡಿಪಾಯ

ತುಮಕೂರು: ವಾಸಿದ ಬಟ್ಟೆಗಳು ವಾಸದ ನೆನಪುಗಳಾಗಿ ಇಂದಿಗೂ ಉಳಿದಿವೆ. ನಮ್ಮ ಬಾಲ್ಯವೇ ಬದುಕಿನ ಅಡಿಪಾಯವಾಗಿದೆ. ಅದರಂತೆ ನಾವೆಲ್ಲರೂ ಕೃತಕ ಬದುಕಿಗಿಂತ ನೈಜ ಮತ್ತು ನೈಸರ್ಗಿಕವಾದವು ಹೆಚ್ಚು ಶಾಶ್ವತವಾದದ್ದು ಎಂಬುದನ್ನೂ ಅರಿಯಬೇಕು ಎಂದು ತುಮಕೂರು ವಿವಿ ಮೌಲ್ಯವಾಪನ ಕುಲಸಚಿವ ಡಾ.ಮೋಹನ್ ಚಂದ್ರಗುತ್ತಿ ಹೇಳಿದರು.
ತುಮಕೂರು ನಗರದ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ವ್ಯಾನೆಜ್ಮೆಂಟ್ ನ ಇನ್ಸ್ಪೈರೋ 2026 ಕಾರ್ಯಕ್ರಮದ ಭಾಗವಾಗಿ ಸೋಮವಾರ ಆಯೋಜಿಸಿದ್ದ ಟೆಕ್ನಿಕಲ್ ಆ್ಯಂಡ್ ವ್ಯಾನೆಜ್ಮೆಂಟ್ ಫೆಸ್ಟ್ ಉದ್ಘಾಟಿಸಿ ವಾತನಾಡಿದರು.
ವ್ಯಾನೆಜ್ಮೆಂಟ್ ವಿದ್ಯಾರ್ಥಿಗಳು ಜಾಹೀರಾತುಗಳನ್ನ ಸೂಕ್ಷ್ಮವಾಗಿ ಗಮನಿಸಬೇಕು. ಅದರಿಂದ ಕ್ರಿಯಾಶೀಲತೆ ಹುಟ್ಟಿಕೊಳ್ಳುತ್ತದೆ. ಡಾ.ರಾಜಕುವಾರ್ ಉಪ್ಪಿನಕಾಯಿ ತಿಂದು ಬಾಯಿ ಚಪ್ಪರಿಸಿ ಆಸ್ವಾದಿಸುತ್ತಿದ್ದರಂತೆ ಅದೇ ರೀತಿ ಚಿಕ್ಕ ಚಿಕ್ಕ ವಿಷಯಗಳಲ್ಲೂ ಖುಷಿ ಕಾಣಬೇಕು ಎಂದರು. 
ಸಾಹೇ ಕುಲಪತಿಗಳ ಸಲಹೆಗಾರ ಡಾ.ವಿವೇಕ್ ವೀರಯ್ಯ, ಪ್ರಾಚಾರ್ಯ ಡಾ.ಮಹಂತೇಶ್ ಎಂ.ನಾಡಕಟ್ಟಿ, ಡಾ.ಜಿ.ಮಮತಾ, ವಿಭಾಗದ ಮುಖ್ಯಸ್ಥರಾದ ಡಾ.ಶಾಲಿಕ, ರು, ಶಿವಕುವಾರ್, ಉಪನ್ಯಾಸಕರಾದ ಕಲ್ಪನಾ, ವನಜಾ, ಗೀತಶ್ರೀ ಮತ್ತಿತರರು ಇದ್ದರು.