ಸವದತ್ತಿಯ ಕುಮಾರೇಶ್ವರ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ದೇವದಾಸ ಎಚ್​., ಮಲ್ಲಿಕಾರ್ಜುನ ಹೆಗ್ಗನ್ನವರ, ಸಾವಿತ್ರಿ ಶಿಬಾರಗಟ್ಟಿ ಇತರರಿದ್ದರು. 
ರಾಜ್ಯ

ಬಾಲ್ಯ, ಶಿಕ್ಷಣ ಪ್ರತಿ ಮಗುವಿನ ಹಕ್ಕು

ಸವದತ್ತಿ: ಮಕ್ಕಳ ಕೈಯಲ್ಲಿ ಪುಸ್ತಕ ಇರಬೇಕು, ದುಡಿಮೆ ಅಲ್ಲ. ಮಕ್ಕಳಿಗೆ ಉತ್ತಮ ಶಿಣ ಮತ್ತು ಸುರತ ಬಾಲ್ಯ ದೊರೆಯುವಂತೆ ಸಮಾಜದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನ ಸಿವಿಲ್​ ನ್ಯಾಯಾಧೀಶ ದೇವದಾಸ ಎಚ್​. ಹೇಳಿದರು. ಕುಮಾರೇಶ್ವರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ಸವದತ್ತಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂ, ತಾಲೂಕು ಆಡಳಿತ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಶನಿವಾರ
ಹಮ್ಮಿಕೊಂಡಿದ್ದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ, ಬಡತನ ಮತ್ತು ಶಿಣದ ಕೊರತೆ ಬಾಲ ಕಾರ್ಮಿಕತೆಗೆ ಪ್ರಮುಖ ಕಾರಣವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಣ ಒದಗಿಸುವ ಮೂಲಕ ಈ ಪಿಡುಗು ತಡೆಗಟ್ಟಲು ಸಾಧ್ಯ ಎಂದರು. ವಕೀಲೆ ಸಾವಿತ್ರಿ ಶಿಬಾರಗಟ್ಟಿ ಮಾತನಾಡಿದರು. ಕಾರ್ಮಿಕ ನಿರೀಕ ಮಹೇಶ ಭಾಗೋಜಿ ಪ್ರತಿಜ್ಞಾ ವಿಧಿ ಬೋಧಿಸಿದರು. ಸದಾಶಿವ ಕೌಜಲಗಿ, ಜೆ.ಬಿ.ಮುನವಳ್ಳಿ, ಕೆ.ಬಿ.ಕೋರಿ, ಸಿಡಿಪಿಒ ಅಮತ ಸಾಣಿಕೊಪ್ಪ, ಎಸ್​.ಎಸ್​. ಬೆಟಗೇರಿ, ಎಸ್​.ಕೆ.ಕಂಬಾಳಿಮಠ, ಕೆ.ಎಂ.ಹುಣಶಿಕಟ್ಟಿ, ಡಾ.ಎನ್​.ಎಲ್​.ಕಳ್ಳಿ, ಸಿ.ಜಿ.ಸವಟಗಿ, ಬಿ.ಎಸ್​.ಅಕ್ಕಿ ಇತರರಿದ್ದರು.