Child suffers serious injuries after falling from a grill.
ಚಿಕ್ಕಬಳ್ಳಾಪುರ: ನಗರದ ಪಿಳ್ಳಪ್ಪ ಕಾಂಪ್ಲೆಕ್ಸ್ನಲ್ಲಿನ ಮೊದಲ ಅಂತಸ್ತಿನ ಬಟ್ಟೆ ಅಂಗಡಿಯ ಗ್ರಿಲ್ ಮೇಲಿಂದ ಕೆಳಕ್ಕೆ ಬಿದ್ದ ಮಗುವಿಗೆ ಗಂಭೀರ ಗಾಯವಾಗಿದೆ.
ಗೊಲ್ಲರದೊಡ್ಡಿ ನಾರಾಯಣಸ್ವಾಮಿ ಹಾಗೂ ಮಧು ದಂಪತಿ ಪುತ್ರಿ ಗಗನ ಸಿಂಧು(4) ಗಾಯಗೊಂಡ ಮಗು. ಇಲ್ಲಿನ ಅಂಗಡಿಗೆ ಬಟ್ಟೆ ಖರೀದಿಸಲು ಇಬ್ಬರು ದಂಪತಿ ಮಕ್ಕಳೊಂದಿಗೆ ಬಂದಿದ್ದರು. ಒಳಗೆ ತಾಯಿಯೊಂದಿಗೆ ನಿಂತುಕೊಂಡಿದ್ದ ಮಗು ಹೊರಗೆ ಬಂದಿದೆ. ಅಂಗಡಿಯ ಮೆಟ್ಟಿಲು ಗ್ರಿಲ್ ಹತ್ತಿ, ಕೆಳಗೆ ನೋಡಲು ಯತ್ನಿಸಿದೆ. ಇದೇ ವೇಳೆ ತಲೆ ಕೆಳಗಾಗಿ ಮೊದಲ ಅಂತಸ್ತಿನ ಕಟ್ಟಡದಿಂದ ನೆಲಕ್ಕೆ ಬಿದ್ದಿದೆ. ತಲೆ, ಬೆನ್ನಿಗೆ ಗಂಭೀರ ಗಾಯವಾಗಿದೆ. ತಂದೆ&ತಾಯಿ ಸ್ಥಳಿಯ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.