ಗುರುಮಠಕಲ್ ತಾಲೂಕಿನ ಇಂಪೇರಿಯಲ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಽÃಶ ಮರಿಯಪ್ಪ ಮಾತನಾಡಿದರು.
- ಸಿವಿಲ್ ನ್ಯಾಯಾಽÃಶ ಮರಿಯಪ್ಪ ಅಭಿಮತ
- ಗುರುಮಠಕಲ್‌ನಲ್ಲಿ ಕಾನೂನು ಅರಿವು ನೆರವು
ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಽÃಶ ಮರಿಯಪ್ಪ ಹೇಳಿದರು.
ಪಟ್ಟಣದ ಇಂಪೇರಿಯಲ್ ಪದವಿಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳಿಗೆ ಮತ್ತು ೨೧ ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರ ಮದುವೆ ಮಾಡುವುದು ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ರ ಪ್ರಕಾರ ಕಾನೂನುಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಬಾಲ್ಯ ವಿವಾಹವು ಮಕ್ಕಳ ಮೂಲಭೂತ ಹಕ್ಕುಗಳಾದ ಶಿಕ್ಷಣ, ಆರೋಗ್ಯ ಮತ್ತು ಸ್ವತಂತ್ರ ಬೆಳವಣಿಗೆಯನ್ನು ಗಂಭೀರವಾಗಿ ಉಲ್ಲಂöಸುತ್ತದೆ. ಮಕ್ಕಳ ಹಕ್ಕುಗಳ ಮೇಲೆ ಬಾಲ್ಯ ವಿವಾಹದ ಪರಿಣಾಮಗಳು ಶಿಕ್ಷಣದ ವಂಚನೆ ಮದುವೆಯ ಕಾರಣದಿಂದ ಮಕ್ಕಳು ಶಾಲೆ ಬಿಡಬೇಕಾಗುತ್ತದೆ, ಇದರಿಂದ ಅವರ ಉನ್ನತ ಶಿಕ್ಷಣ ಮತ್ತು ಭವಿಷ್ಯ ನಾಶವಾಗುತ್ತದೆ ಎಂದರು.
ಬಾಲ್ಯ ವಿವಾಹ ತಡೆಗೆ ಪ್ರತಿ ಜಿಲ್ಲೆಯಲ್ಲೂ ಬಾಲ್ಯ ವಿವಾಹ ನಿಷೇಧ ಅಽಕಾರಿಗಳನ್ನು ನೇಮಿಸಲಾಗುತ್ತದೆ. ಬಾಲ್ಯ ವಿವಾಹದ ಬಗ್ಗೆ ದೂರು ನೀಡಲು ಅಥವಾ ಸಹಾಯ ಪಡೆಯಲು ೧೦೯೮ (ಮಕ್ಕಳ ಸಹಾಯವಾಣಿ) ಕರೆ ಮಾಡಬಹುದು ಎಂದು ಹೇಳಿದರು.
ಸಹಾಯಕ ಕಾನೂನು ಅಭಿರಕ್ಷಕಿ ಸುಸ್ಮಾ ಜಾಧವ್, ಮಹಿಳಾ ಮತ್ತು ಮಕ್ಕಳ ಅಽಕಾರಿ ಗಂಗೂಬಾಯಿ ಮಾತನಾಡಿದರು. ಕಾಲೇಜು ನಿರ್ದೇಶಕ ಗುಲಾಮ ಜಿಲಾನಿ, ಗುಲಾಂ ಸುಬಾನಿ, ಪ್ರಾಚಾರ್ಯ ಸುರೇಶ ಗೌಡ, ಉಪನ್ಯಾಸಕರಾದ ಮಹಾಂತೇಶ, ಮಹದೇವರೆಡ್ಡಿ, ಸಂಜೀವರೆಡ್ಡಿ ಇತರರಿದ್ದರು.