- ಮದುವೇಗೆ ನಿರಾಕರಿಸಿದ ಯುವತಿಯ ಮೇಲೆ ಹಲ್ಲೆ
- ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದಲ್ಲಿ ಘಟನೆ
- ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಮದುವೆಗೆ ನಿರಾಕರಿಸಿದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ!
ಚಿಕ್ಕೋಡಿ: ಮದುವೆಯಾಗುವಂತೆ ಪೀಡಿಸುವ ಯುವಕನನ್ನು ಯುವತಿ ಮದುವೆಯಾಗಲು ನಿರಾಕರಿಸಿದ ಯುವತಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಯುವಕನೋರ್ವ ಮನಬಂದಂತೆ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಕೇರೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ತಾಲೂಕಿನ ಜೋಡಕುರಳಿ ಗ್ರಾಮದ ನಿವಾಸಿ ಬೀರಪ್ಪ ಕಜ್ಜನವರ ಹಲ್ಲೆ ಮಾಡಿರುವ ಆರೋಪಿ.ಈತ ಕೇರೂರು ಗ್ರಾಮದ ವಿದ್ಯಾಶ್ರೀ ಕಿಲಾರಿ ಎಂಬ ಯುವತಿಯನ್ನು ಮದುವೆಯಾಗುವಂತೆ ಪದೇ ಪದೇ ಪೀಡಿಸುತ್ತಿದ್ದ.ಆದರೆ ಯುವತಿ ಇದಕ್ಕೆ ಸಮ್ಮತಿಸಿರಲಿಲ್ಲ. ಮಂಗಳವಾರ ರಾತ್ರಿ ಎಂಟು ಜನರೊಂದಿಗೆ ಯುವತಿಯ ಮನೆಗೆ ನುಗ್ಗಿ ಕಣ್ಣಿಗೆ ಖಾರದಪುಡಿ ಎರಚಿ ವಿದ್ಯಾಶ್ರೀ ಕಿಲಾರಿ, ತಂದೆ ಮಹಾದೇವ ಕಿಲಾರಿ, ತಾಯಿ ಶೋಭಾ ಕಿಲಾರಿ ಹಾಗೂ ತಮ್ಮ ವಿಜಯದ ಮೇಲೆಯೂ ಮನಬಂದಂತೆ ಹಲ್ಲೆ ನಡೆಸಿದ್ದಾನೆ . ಹಲ್ಲೆಯಿಂದ ವಿದ್ಯಾಶ್ರೀಗೆ ಗಂಭೀರ ಗಾಯಗಳಾಗಿದ್ದರೆ, ಆಕೆಯ ತಂದೆ-ತಾಯಿಗೂ ಸಣ್ಣಪುಟ್ಟ ಗಾಯದ ಗುರುತು. ಗಾಯಾಳುಗಳ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಪ್ರಕರಣ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡ ಅಂಕಲಿ ಪೊಲೀಸರು ತಿಳಿಸಿದ್ದಾರೆ.