ಅಭಿವೃದ್ಧಿ ಕಾಮಗಾರಿಗೆ ಚಾಲನೆ 
ರಾಜ್ಯ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಅಭಿವೃದ್ಧಿ ಕಾಮಗಾರಿಗೆ ಗಣೇಶ ಹುಕ್ಕೇರಿ ಚಾಲನೆ
  • ಚಿಕ್ಕೋಡಿ ಪಟ್ಟಣದಲ್ಲಿ ಕಾಮಗಾರಿಗೆ ಭೂಮಿ ಪೂಜೆ
  • ರಸ್ತೆ ,ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ
ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಗಣೇಶ ಹುಕ್ಕೇರಿ ಚಾಲನೆ 
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ: 
ಪಟ್ಟಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು,  ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ 14.48 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದರು.
ಪಟ್ಟಣದ ಝಾರಿ ಗಲ್ಲಿ, ವಿಠ್ಠಲ ದಾಮೋದರ ನಗರ, ಆರ್. ಕೆ ಕಾಲೋನಿ, ಹುಡ್ಕೊ ಕಾಲೋನಿ, ಬಸವೇಶ್ವರ ನಗರ ಹಾಗೂ ಸಾಯಿ ಮಂದಿರ ಬಳಿ ಚರಂಡಿ, ಸೋಮವಾರ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಂತದಲ್ಲಿ 3 ಕೋಟಿ ರೂ.ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿ.ಪ ಸದಸ್ಯ ಪ್ರಕಾಶ ಹುಕ್ಕೇರಿಯವರ ಮಾರ್ಗದರ್ಶನದಲ್ಲಿ ಕಾಮಗಾರಿಗೆ ಅನುದಾನ ಮಂಜೂರು ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಪಟ್ಟಣದ ಸಾವರಕರ್ ನಗರ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 57, ಹಾಲಟ್ಟಿ ಮತ್ತು ಗಣೇಶ ಬಡಾವಣೆ ರಸ್ತೆ ಮತ್ತು ಕಾಮಗಾರಿಗೆ 67 ಲಕ್ಷ ಹರಿ ನಗರ ಮಹಾವೀರ ಅಲ್ಲಿ ರಸ್ತೆ ಕಾಮಗಾರಿಗೆ 54 ಲಕ್ಷ, ಹೊಸ ಪುರಸಭೆ ಕಾರ್ಯಾಲಯದ ಹತ್ತಿರ ಮತ್ತು ಕವಟಗಿಮಠ ಸುಮಾರು ರಸ್ತೆ ಕಾಮಗಾರಿಗೆ 63 ಲಕ್ಷ ರೂ. ಹೊಸಪೇಟೆ ಗಲ್ಲಿ ಜಾಡರ ಗಲ್ಲಿ ರಸ್ತೆ ನಿರ್ಮಾಣಕ್ಕೆ 21 ಲಕ್ಷ , ಭೀಮಾ ಯೌಲನಿಕ ರಸ್ತೆ, ಚರಂಡಿ ಕಾಮಗಾರಿಗೆ 50 ಲಕ್ಷ ರೂ ಮಂಜೂರಾಗಿದೆ.  
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪುಟ್ ಪಾತ್, ಟ್ರಾಫಿಕ್ ಸಿಗ್ನಲ್ ಹಾಗೂ ವಿದ್ಯುತ್ ಬೀದಿ ದೀಪ ಅಳವಡಿಸಲು 4.87 ಕೋಟಿ, ಬಸ್ ನಿಲ್ದಾಣದಿಂದ ಹಳೆ ಪುರಸಭೆ ಕಾರ್ಯಾಲಯದ ವರೆಗೆ, ಕೆ.ಸಿ ರಸ್ತೆಯಿಂದ ಮುಧೋಳ ನಿಪ್ಪಾಣಿ ರಸ್ತೆ ಪುಟ್ ಪಾತ್ ರಸ್ತೆ ಮತ್ತು ವಿದ್ಯುತ್ ಕಾಮಗಾರಿಗಳಿಗೆ 2 ಕೋಟಿ ಅನುದಾನ ಮಂಜೂರಾಗಿದ್ದರೆ ಎಲ್ಲ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.
ಪುರಸಭೆ ಮುಖ್ಯಾಧಿಕಾರಿ ಜಗದೀಶ ಈಟಿ, ಮಾಜಿ ಅಧ್ಯಕ್ಷ ರಾಮ ಮಾನೆ, ಪ್ರಭಾಕರ ಕೋರೆ, ನರೇಂದ್ರ ನೇರ್ಲೆಕರ, ಶಾಮ ರೇವಡೆ, ಗುಲಾಬಹುಸೇನ ಬಾಗವಾನ, ಅನಿಲ ಮಾನೆ, ವರ್ಧಮಾನ ಸದಲಗೆ, ಪ್ರವೀಣ ಕಾಂಬಳೆ, ಸಂತೋಷ ಜೋಗಲೆ, ವಿಶ್ವನಾಥ ಕಾಮಗೌಡ, ಅಜಯ ಕವಟಗಿಮಠ, ಸತೀಶ ಕುಲಕರ್ಣಿ, ಚಿದಾನಂದ ನವಲಿಹಾಳ, ಸಂದೀಪ ಶೇರಖಾನೆ ಇತರರಿದ್ದರು.