cm siddaramaiah 
ರಾಜ್ಯ

ನಂದಿನಿ ಬ್ರಾಂಡ್ ಉತ್ಪನ್ನಗಳ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಪ್ರಮುಖ ಮುಖ್ಯಾಂಶಗಳು

  • 175 ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನ
  • ಬದಲಾಗುತ್ತಿರುವ ಗ್ರಾಹಕರ ಜೀವನ ಶೈಲಿ ಹಾಗೂ ಆಹಾರ ಅಭಿರುಚಿಗಳನ್ನು
ಬೆಂಗಳೂರು:
ಕೆಎಂಎ್ ಹೊರ ತಂದಿರುವ ನಂದಿನಿ ಬ್ರಾಂಡ್‌ನ ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.
ನಂದಿನಿ ಬ್ರ್ಯಾಂಡ್ ನಲ್ಲಿ 175 ಕ್ಕೂ ಹೆಚ್ಚು ಉತ್ಕೃಷ್ಟ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸ್ಪರ್ಧಾತ್ಮಕ ದರಗಳಲ್ಲಿ ಒದಗಿಸುತ್ತಾ ಬಂದಿರುವ ಕೆಎಂಎ್ ಈಗ, ಗುಡ್‌ಲೈಫ್ ತುಪ್ಪ (ಹೈ ಆರೋಮ), ಪನೀರ್ (ಮೀಡಿಯಂ ಫ್ಯಾಟ್), ಎನ್ ಪ್ರೋಮಿಲ್ಕ್, ಪ್ರೋಬಯಾಟಿಕ್ ಮೊಸರು ಮತ್ತು ಇತರೆ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ನಂದಿನಿ ಬ್ರ್ಯಾಂಡ್ ರಾಜ್ಯದಲ್ಲಿ ಅಷ್ಟೇ ಅಲ್ಲ, ಹೊರರಾಜ್ಯ ಮತ್ತು ಹೊರದೇಶಗಳಲ್ಲಿಯೂ ಸಹ ಗ್ರಾಹಕರ ವಿಶ್ವಾಸ ಗಳಿಸಿ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.
ಬದಲಾಗುತ್ತಿರುವ ಗ್ರಾಹಕರ ಜೀವನ ಶೈಲಿ ಹಾಗೂ ಆಹಾರ ಅಭಿರುಚಿಗಳನ್ನು ಪರಿಗಣಿಸಿ ನಂದಿನಿ ಬ್ರ್ಯಾಂಡ್‌ನಲ್ಲಿ ಕ್ಯೂಆರ್ ಕೋಡ್ ಭದ್ರತೆಯೊಂದಿಗೆ ಗುಡ್‌ಲೈಫ್ ಉಪಬ್ರ್ಯಾಂಡ್‌ನಲ್ಲಿ ಇವೆಲ್ಲವೂ ಲಭ್ಯವಿದೆ.
ಹೈ ಅರೋಮ ತುಪ್ಪ, ಕ್ಯೂಆರ್ ಕೋಡ್‌ನೊಂದಿಗೆ ಪೆಟ್ ಜಾರ್‌ಗಳಲ್ಲಿ ನಂದಿನಿ ಶುದ್ಧ ತುಪ್ಪ, ಮೀಡಿಯಂ ಫ್ಯಾಟ್ ಪನೀರ್, ಹೆಚ್ಚಿನ ಪ್ರೋಟಿನ್ ಅಂಶವುಳ್ಳ ಹೊಸ ಮಾದರಿಯ ಎನ್-ಪ್ರೋ ಮಿಲ್ಕ್, ಪ್ರೋಬಯಾಟಿಕ್ ಮೊಸರು, ಪ್ರೊಬಯಾಟಿಕ್ ಮಾವಿನ ಲಸ್ಸಿ, ಪ್ರೊಬಯಾಟಿಕ್ ಸ್ಟ್ರಾಬೆರಿ ಲಸ್ಸಿ, ಡೇರಿ ವೈಟ್ನರ್ ಲಭ್ಯವಿದೆ. 10 ರೂ ದರದಲ್ಲಿ ಹಸುವಿನ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಿರುವುದು ವಿಶೇಷ.
ಈ ಸಂಧರ್ಭದಲ್ಲಿ ಶಾಸಕರು ಮತ್ತು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾದ ಕೆ.ವೈ.ನಂಜೇಗೌಡ, ಪುತ್ತೂರು ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ, ಸಿಎಂ ಅಪರ ಕಾರ್ಯದರ್ಶಿಗಳಾದ ಎಸ್.ಜಿಯಾವುಲ್ಲಾ, ಕೆಎಂಎಫ್‌ನ ಆಡಳಿತಾಧಿಕಾರಿ ಟಿ.ಹೆಚ್.ಎಂ. ಕುಮಾರ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕೆಎಂಎ್ ಎಂಡಿ ಬಿ. ಶಿವಸ್ವಾಮಿ ಉಪಸ್ಥಿತರಿದ್ದರು.

*ನಂದಿನಿ ಬ್ರ್ಯಾಂಡ್ ರಾಜ್ಯದಲ್ಲಿ ಅಷ್ಟೇ ಅಲ್ಲ, ಹೊರರಾಜ್ಯ ಮತ್ತು ಹೊರದೇಶಗಳಲ್ಲಿಯೂ ಸಹ ಗ್ರಾಹಕರ ವಿಶ್ವಾಸ ಗಳಿಸಿ ಪ್ರತಿಷ್ಠಿತ ಹಾಲಿನ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.