ಹೊಸಕೋಟೆಯ Sankranthi ಚನ್ನಬೈರೆಗೌಡ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಶಾಸಕ ಶರತ್​ ಬಚ್ಚೇಗೌಡ ಹಾಗೂ ಸಿನಿಮಾ ನಟರಾದ ನಾಯಕ ನಟ ಶಾನಿಲ್​ ಗುರು ಹಾಗೂ ನಿರ್ದೇಶಕ ಜೆ.ಪಿ.ತುಮಿನಾಡ್​ ಅಶೋಕ್​ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  
ರಾಜ್ಯ

ವರ್ಷದೊಳಗೆ ಛತ್ರಪತಿ ಶಿವಾಜಿ ಪುತ್ಥಳಿ ನಿರ್ಮಾಣ Sankranthi

ಹೊಸಕೋಟೆ: ಮುಂದಿನ ಸಂಕ್ರಾಂತಿ ಒಳಗಾಗಿ ನಗರದಲ್ಲಿ ಛತ್ರಪತಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಬಿಎಂಆರ್​ಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್​ ಕೋರಿದರು.
ನಗರದಲ್ಲಿ ಹಮ್ಮಿಕೊಂಡಿದ್ದ ಸಂಕ್ರಾಂತಿ ಸಂಭ್ರಮದಲ್ಲಿ ಚಲನಚಿತ್ರ ನಟರನ್ನು ಸನ್ಮಾನಿಸಿ Sankranthi ಮಾತನಾಡಿದ ಅವರು, ನಗರದಲ್ಲಿ ಚಲನಚಿತ್ರ ನಟರಲ್ಲಿ ಬಹಳಷ್ಟು ಜನ ಸಮಸ್ಯೆ ಎದುರಿಸುತಿದ್ದಾರೆ. ಅದರಲ್ಲಿ ಬೆಂಗಳೂರಿನಲ್ಲಿರುವ ಖ್ಯಾತ ಚಲನಚಿತ್ರ ನಟಿ ಲಕ್ಷಿ$್ಮದೇವಿ ಹಾಗೂ ಮಂಜುಳಾ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ವೈಯಕ್ತಿಕವಾಗಿ ತಲಾ 50 ಸಾವಿರ ಧನಸಹಾಯ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆಯನ್ನು ಮರಾಠ ಸಮಾಜದ ಸಂದ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಶಾಸಕ ಶರತ್​ ಬಚ್ಚೇಗೌಡ ಹಾಗೂ ಸೂ ಪ್ರಮ್​ ಸೋ ಚಿತ್ರದ ನಾಯಕನಟ ಶಾನಿಲ್​ ಗುರು ಹಾಗೂ ನಿರ್ದೇಶಕ ಜೆ.ಪಿ.ತುಮಿನಾಡ್​ ಅಶೋಕ್​ ಅವರನ್ನು ಸನ್ಮಾನಿಸಲಾಯಿತು.
ಜನನಿ ಚಾರಿಟಬಲ್​ ಟ್ರಸ್ಟ್​ನ ಸಂದೀಪ್​, ಉಮೇಶ್​, ಸತೀಸ್​, ಮುನಿಯಪ್ಪ, ರವಿ, ಮಂಜುನಾಥ್​, ಕುಮಾರಿ, ಮುನಿಯಪ್ಪ, ಮುಖಂಡರಾದ ಆರ್​ಟಿಸಿ ಗೋವಿಂದ್​ ರಾಜ್​, ವರದಾಪುರ ಆನಂದ್​ ಇದ್ದರು.
ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ ಅವರಿಂದ ನಾಯಕತ್ವ ಗುಣ ಕಲಿತಿದ್ದು, ಅವರ ಸಹಕಾರದಿಂದ ಸಂಕ್ರಾಂತಿ ಕಾರ್ಯಕ್ರಮವನ್ನು 30 ವರ್ಷಗಳಿಂದ ಮಾಡಿಕೊಂಡು ಬರುತಿದ್ದೇನೆ. ಈಗ ಶಾಸಕ ಶರತ್​ ಬಚ್ಚೇಗೌಡ ಸಹಕಾರ ನೀಡುತಿದ್ದು, ಮುಂದಿನ ದಿನಗಳಲ್ಲಿಯೂ ಈ ಕಾರ್ಯಕ್ರಮದ ಜತೆ ಸಮಾಜ ಸೇವೆ ಮುಂದುವರಿಯಲಿದೆ.
> ಡಾ.ಸಿ.ಜಯರಾಜ್​
ಅಧ್ಯಕ್ಷ, ಜನನಿ ಚಾರಿಟಬಲ್​ ಟ್ರಸ್ಟ್​