ಯಡ್ರಾಮಿಯಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಾಮ್ರಾಜ್ಯೋತ್ಸವ ಹಾಗೂ ತಾಲೂಕು ೂಷಣಾ ಸಾಂಕ್ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ತಾಲೂಕು ಕಾರ್ಯವಾಹ ಶಂಕರಲಿಂಗ ಮಲ್ಲಾಡ್ ಮಾತನಾಡಿದರು. ಶ್ರೀ ಸಿದ್ಧಲಿಂಗ ಸ್ವಾಮೀಜಿ, ಪ್ರಭುಲಿಂಗಯ್ಯ ಹಿರೇಮಠ ಇದ್ದರು.
- ಶಂಕರಲಿಂಗ ಮಲ್ಲಾಡ್ ಅನಿಸಿಕೆ
- ಯಡ್ರಾಮಿಯಲ್ಲಿ ಹಿಂದೂ ಸಾಮ್ರಾಜ್ಯೋತ್ಸವ
ಯಡ್ರಾಮಿ: ಶ್ರೀ ಕೃಷ್ಣನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಧರ್ಮಯುದ್ಧ ನಡೆಸಿದ ಛತ್ರಪತಿ ಶಿವಾಜಿ ಮಹಾರಾಜರು ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂದ ಜೇವರ್ಗಿ ತಾಲೂಕು ಕಾರ್ಯವಾಹ ಶಂಕರಲಿಂಗ ಮಲ್ಲಾಡ್ ಹೇಳಿದರು.
ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂದ ಶ್ರೀ ಸರ್ದಾರ್ ಶರಣಗೌಡ ಶಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಿಂದೂ ಸಾಮ್ರಾಜ್ಯೋತ್ಸವ ಹಾಗೂ ತಾಲೂಕು ಘೋಷಣಾ ಸಾಂಕ್ ಕಾರ್ಯಕ್ರಮದಲ್ಲಿ ಮಾತನಾಡಿ, ಆರ್ಎಸ್ಎಸ್ ಸ್ವಯಂ ಸೇವಕರಲ್ಲಿ ದೇಶಭಕ್ತಿ ಹಾಗೂ ಸಮಾಜಸೇವಾ ಮನೋಭಾವ ಬೆಳೆಸುತ್ತಿದೆ. ಪ್ರತಿ ವರ್ಷ ಸಾಂಪ್ರದಾಯಿಕವಾಗಿ ಪ್ರತಿಪದ ಮಹೋತ್ಸವ, ಹಿಂದೂ ಸಾಮ್ರಾಜ್ಯ ದಿವಸ್, ಗುರುಪೂರ್ಣಿಮೆ, ರಾ ಬಂಧನ, ವಿಜಯದಶಮಿ, ಮಕರ ಸಂಕ್ರಾಂತಿ ಸೇರಿ ಒಟ್ಟು ಆರು ಪ್ರಮುಖ ಸಾಂಸತಿಕ ಹಾಗೂ ರಾಷ್ಟ್ರೀಯ ಉತ್ಸವಗಳನ್ನು ಆಚರಿಸುತ್ತದೆ ಎಂದರು.
ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ಸಾನ್ನಿಧ್ಯ, ನಿವೃತ್ತ ಶಿಕ್ಷಕ ಪ್ರಭುಲಿಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮೌನೇಶ ಭಜಂತ್ರಿ, ಮಲ್ಲಿಕಾರ್ಜುನ ಹೂಗಾರ, ಈರಣ್ಣ ಸುಂಕದ, ಆನಂದ ಯತ್ನಾಳ, ಭಾಗೇಶ ಹೋತಿನಮಡು, ಶರಣು ಸುಬೇದಾರ, ಪ್ರಭುಗೌಡ ಸರಕಾರ, ರುದ್ರಗೌಡ ಬಿರಾದಾರ, ರಮೇಶ ಪವಾರ್, ಶಿವಕುಮಾರ ತಾಳಿಕೋಟಿ ಇತರರಿದ್ದರು.
"
ಛತ್ರಪತಿ ಶಿವಾಜಿ ಮಹಾರಾಜರ ದೇಶಭಕ್ತಿ ಹಾಗೂ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ಹಾಗೂ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಮಹಾರಾಜರು ಪಟ್ಟಾಭಿಷಕ್ತರಾಗಿ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿದ ದಿನವನ್ನು ಸಂವೂ ದೇಶಾದ್ಯಂತ ಹಿಂದೂ ಸಾಮ್ರಾಜ್ಯ ದಿವಸ್ ಎಂದು ಆಚರಿಸುತ್ತದೆ.
— > ಶಂಕರಲಿಂಗ ಮಲ್ಲಾಡ್, ತಾಲೂಕು ಕಾರ್ಯವಾಹ, ಆರ್ಎಸ್ಎಸ್