ಚಿವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ 
ರಾಜ್ಯ

chevening scholarship: ಬ್ರಿಟನ್‌ನಲ್ಲಿ ಉಚಿತ ಮಾಸ್ಟರ್ಸ್: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಪ್ರಮುಖ ಮುಖ್ಯಾಂಶಗಳು

  • 2027-28ನೇ ಸಾಲಿನ ’ಚಿವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ’ ಯೋಜನೆಗಾಗಿ ಅರ್ಹ ವಿದ್ಯಾರ್ಥಿನಿಯರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
  • ಕರ್ನಾಟಕದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಮತ್ತು ಬ್ರಿಟಿಷ್ ಹೈಕಮಿಷನ್ 2027-28ನೇ ಸಾಲಿನ ’ಚಿವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ’
  • ಅರ್ಜಿ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನವಾಗಿವೆ.
ಬೆಂಗಳೂರು:

ಬ್ರಿಟನ್‌ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಪದವಿಯನ್ನು ಉಚಿತವಾಗಿ ವ್ಯಾಸಂಗ ಮಾಡಲು ಆಸಕ್ತಿ ಹೊಂದಿರುವ ಕರ್ನಾಟಕದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರ ಮತ್ತು ಬ್ರಿಟಿಷ್ ಹೈಕಮಿಷನ್ 2027-28ನೇ ಸಾಲಿನ ’ಚಿವನಿಂಗ್-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿವೇತನ’ ಯೋಜನೆಗಾಗಿ ಅರ್ಹ ವಿದ್ಯಾರ್ಥಿನಿಯರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಈ ಯೋಜನೆಯಡಿ ರಾಜ್ಯದ ಐವರು ವಿದ್ಯಾರ್ಥಿನಿಯರಿಗೆ ಬ್ರಿಟನ್‌ನಲ್ಲಿ ಉನ್ನತ ಶಿಕ್ಷಣ ಪಡೆಯಲು ಅವಕಾಶವಿರಲಿದೆ. ತಗಲುವ ಒಟ್ಟು ವೆಚ್ಚದಲ್ಲಿ ತಲಾ ಶೇ.50ರಷ್ಟು ವೆಚ್ಚವನ್ನು ಎರಡೂ ಸರ್ಕಾರಗಳು ಭರಿಸಲಿವೆ.
ಅಭ್ಯರ್ಥಿಯು ಕಡ್ಡಾಯವಾಗಿ ಭಾರತೀಯ ಪ್ರಜೆಯಾಗಿರಬೇಕು. ಕರ್ನಾಟಕದ ಕಾಲೇಜುಗಳಿಂದ ಪದವಿ ಪಡೆದಿರಬೇಕು. (ಬೇರೆ ರಾಜ್ಯದವರಾಗಿದ್ದರೂ ಸಹ, ಕರ್ನಾಟಕದಲ್ಲಿ ಪದವಿ ಪಡೆದು, ಅರ್ಜಿ ಸಲ್ಲಿಸುವ ಸಮಯದಲ್ಲಿ ಇಲ್ಲಿಯೇ ವಾಸಿಸುತ್ತಿರುವವರೂ ಅರ್ಹರು). ಮುಕ್ತ ವಿಶ್ವವಿದ್ಯಾಲಯ ಅಥವಾ ದೂರಶಿಕ್ಷಣದ ಮೂಲಕ ಪಡೆದ ಪದವಿಗಳಿಗೆ ಅವಕಾಶವಿರುವುದಿಲ್ಲ. ಪದವಿ ನಂತರ ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. (ಅಥವಾ ಪದವಿ/ಸ್ನಾತಕೋತ್ತರ ಪದವಿ ಹಂತದಲ್ಲಿ ಅಥವಾ ನಂತರ 2,800 ಗಂಟೆಗಳ ಇಂಟರ್ನ್‌ಶಿಪ್ ಪೂರ್ಣಗೊಳಿಸಿರುವುದನ್ನು ಸಹ ಪರಿಗಣಿಸಲಾಗುತ್ತದೆ).
ಅರ್ಜಿ ಸಲ್ಲಿಸಲು ಅಕ್ಟೋಬರ್ 6 ಕೊನೆಯ ದಿನವಾಗಿವೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ https://www.chevening.org/scholarship/india/
ಸಂಪರ್ಕಿಸಬಹುದಾಗಿದೆ.