chess ತುರುವೇಕೆರೆ ತಾಲೂಕಿನ ಲಯನ್ಸ್​ ಭವನದಲ್ಲಿ ಹಮ್ಮಿಕೊಂಡಿದ್ದ ಮುಕ್ತ ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ. ನಾಗರಾಜ್​, ಟಿ.ಸಿ. ಸುನಿಲ್​ ಬಾಬು, ರವಿ, ವಕೀಲ ಪಿ.ಎಚ್​.ಧನಪಾಲ್​, ಪ್ರೊ. ಗಂಗಾಧರ ದೇವರಮನೆ, ಮಹೇಶ್​, ಕಾರ್ತಿಕ್​ ಇದ್ದರು.  
ರಾಜ್ಯ

ಚದುರಂಗದಿಂದ ಮನಸ್ಸಿನ ಏಕಾಗ್ರತೆ ವೃದ್ಧಿ chess

ತುಮಕೂರು ಡೆಸ್ಕ್
ತುರುವೇಕೆರೆ: ಚದುರಂಗ ಮನಸ್ಸಿನ ಏಕಾಗ್ರತೆಯ ಜತೆಗೆ ತಾರ್ಕಿಕ ಶಕ್ತಿಯನ್ನು chess ಹೆಚ್ಚಿಸುತ್ತದೆ. ಇದರಿಂದ ಮನುಷ್ಯನ ಆಲೋಚನಾ ಸರಣಿಯಲ್ಲಿ ಸ್ಟಷ್ಟತೆ ಮತ್ತು ಪರಿಪೂರ್ಣತೆಗೆ ಅವಕಾಶವಾಗುತ್ತದೆ ಎಂದು ವಕೀಲ ಪಿ.ಎಚ್​.ಧನಪಾಲ್​ ತಿಳಿಸಿದರು.
ತಾಲೂಕಿನ ಲಯನ್ಸ್​ ಭವನದಲ್ಲಿ ಲಯನ್ಸ್​ ಕ್ಲಬ್​ ಮತ್ತು ಕಲ್ಪತರು ಲಯನ್ಸ್​ ಚಾರಿಟಬಲ್​ ಟ್ರಸ್ಟ್​ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮುಕ್ತ ಚದುರಂಗ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಚದುರಂಗ ಸ್ಪರ್ಧೆಗಳು ನಡೆಯುತ್ತಿದ್ದು, ರಾಜ್ಯದ ಗಮನ ಸೆಳೆದಿದೆ. ನೂರಾರು ರಾಷ್ಟ್ರಮಟ್ಟದ ಆಟಗಾರರು ರೂಪುಗೊಂಡಿದ್ದಾರೆ. ಇದರ ಹಿನ್ನೆಲೆಯ ಶಕ್ತಿಯಾಗಿ, ಸ್ಪೂರ್ತಿಯಾಗಿ ನಿಂತಿರುವ ನುರಿತ ಆಟಗಾರರೂ, ತರಬೇತುದಾರರೂ ಆದ ಡಾ. ನಾಗರಾಜ್​ ಅವರಿಗೆ ಅಭಿನಂದನೆ ಸಲ್ಲಬೇಕು ಎಂದರು.
ಗ್ಲೋಬಲ್​ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಪ್ರೊ.ಗಂಗಾಧರ ದೇವರಮನೆ ಮಾತನಾಡಿ, ಮಕ್ಕಳ ಸೃಜನಶೀಲ ಅಭಿವ್ಯಕ್ತಿಯನ್ನು ಕಾಪಾಡುವುದು ಇಂದಿನ ದಿನಗಳಲ್ಲಿ ಅತ್ಯಗತ್ಯ ಎಂದರು.
ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮುಕ್ತ ವಿಭಾಗದಲ್ಲಿ ಕೆ.ಬಿ. ಕ್ರಾಸ್​ನ ಬಸವೇಶ್​, ತುಮಕೂರಿನ ದ್ರುವಲ್​, ತುರುವೇಕೆರೆಯ ರವೀಂದ್ರ ಪ್ರಸಾದ್​ ಕ್ರಮವಾಗಿ ಮೊದಲ ಮೂರು ಬಹುಮಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ತುಮಕೂರಿನ ಸುಮಲತಾ ಪ್ರಥಮ ಬಹುಮಾನ ಪಡೆದರು. ಪ್ರಾರಂಭಿಕ ವಿಭಾಗದಲ್ಲಿ ತುರುವೇಕೆರೆಯ ತೇಜಸ್​ ಗೌಡ ಪ್ರಥಮ ಬಹುಮಾನ ಪಡೆದರು. ಲಯನ್ಸ್​ ಕ್ಲಬ್​ ಅಧ್ಯಕ್ಷ ಟಿ.ಸಿ.ಸುನಿಲ್​ ಬಾಬು, ಡಾ.ನಾಗರಾಜ್​, ಕಾರ್ಯದರ್ಶಿ ರವಿ, ಮಹೇಶ್​, ಕಾರ್ತಿಕ್​ ಇದ್ದರು.