ಇತ್ತೀಚೆಗೆ ಮೃತಪಟ್ಟ ನೆಲಮಂಗಲ ನಗರಸಭೆಯ ನೌಕರರ ಕುಟುಂಬಕ್ಕೆ ಅಧ್ಯಕ್ಷ ಎನ್.ಗಣೇಶ್ ಪರಿಹಾರದ ಚೆಕ್ ವಿತರಿಸಿದರು. ವ್ಯವಸ್ಥಾಪಕ ಮಮ್ತಾಜ್ ಪಾಷಾ, ನಗರಸಭೆ ಸದಸ್ಯ ಶಿವಕುಮಾರ್, ಅಂಜಮೂರ್ತಿ, ಪುರುಷೋತ್ತಮ್, ನರಸಿಂಹಮೂರ್ತಿ ಇದ್ದರು.
ನೆಲಮಂಗಲ : ಇತ್ತೀಚೆಗೆ ಅಪಘಾತ, ಅನಾರೋಗ್ಯ ಹಾಗೂ ಇನ್ನಿತರ ಕಾರಣಗಳಿಗೆ ಮೃತಪಟ್ಟ ನಗರಸಭೆ ನೌಕರರ ಕುಟುಂಬಕ್ಕೆ ನಗರಸಭೆ ಅಧ್ಯಕ್ಷ ಎನ್.ಗಣೇಶ್ ಪರಿಹಾರದ ಚೆಕ್ ವಿತರಿಸಿದರು.
ನಗರಸಭೆಯಲ್ಲಿ ಬುಧವಾರ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯದಡಿ ಇತ್ತೀಚೆಗೆ ಪರಿಹಾರ ಧನ ಚಿಕ್ ವಿತರಿಸಿ ಮಾತನಾಡಿದ ಎನ್.ಗಣೇಶ್, ನೌಕರರ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದರೂ ಪರಿಹಾರ ಮೊತ್ತವನ್ನು ಸದುಪಯೋಗ ಪಡಿಸಿಕೊಂಡು ಅವರ ಮನೆಯವರು ಜೀವನ ನಿರ್ವಹಣೆ ಮಾಡಬೇಕಾಗಿದೆ. ಅವರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.
ಚೆಕ್ ವಿತರಣೆ : ನಗರಸಭೆ ಟ್ರಾ$್ಯಕ್ಟರ್ ಚಾಲಕ ಎನ್.ಪಿ.ಲಕ್ಷಿ$್ಮನಾರಾಯಣ್ ಕುಟುಂಬಕ್ಕೆ 2.24 ಲಕ್ಷ ರೂ., ನೀರು ಸರಬರಾಜುಗಾರ ವಿ.ಲಕ್ಷಿ$್ಮನಾರಾಯಣ್ ಕುಟುಂಬಕ್ಕೆ 2.30 ಲಕ್ಷ ರೂ., ಪೌರಕಾರ್ಮಿಕರಾದ ಮಂಗಳಾ ಕುಟಂಬಕ್ಕೆ 3.55 ಲಕ್ಷ ರೂ. ಸೇರಿ ಸಿಬ್ಬಂದಿ ರಾಜು ಕುಟುಂಬಕ್ಕೆ 2.47 ಲಕ್ಷ ರೂಪಾಯಿ ವಿತರಣೆ ಮಾಡಲಾಗಿದೆ ಎಂದು ನಗರಸಭೆ ವ್ಯವಸ್ಥಾಪಕ ಮಮ್ತಾಜ್ ಪಾಷಾ ತಿಳಿಸಿದರು. ಪೌರಾಯುಕ್ತ ಗಂಗಾಧರ್, ಮುಖಂಡ ಕೆ.ಕೃಷ್ಣಪ್ಪ, ಮುನಿಯಪ್ಪ, ಮುರಳಿ, ವಸಂತ್, ನರಸಿಂಹಮೂರ್ತಿ, ಮೋಹನ್ಕುಮಾರ್ ಇತರರು ಇದ್ದರು.