ತುರುವೇಕೆರೆ ತಾಲೂಕು ಬಾಣಸಂದ್ರದಲ್ಲಿ ಲಯನ್ಸ್ Health camp ಕ್ಲಬ್ನಿಂದ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ನೇತ್ರತಜ್ಞ ಡಾ.ಷಡಕ್ಷರಿ, ಮಲ್ಲಿಕಾರ್ಜುನ ದುಂಡ, ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿ, ರಾಜಣ್ಣ, ರಾಮಕೃಷ್ಣ, ಸಿ.ಜಿ.ನಾಗರಾಜು, ದೃಷ್ಟಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಸಚಿನ್ ಮಾಯಸಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದ ಯತೀಶ್ ಮತ್ತು ಸಿಬ್ಬಂದಿ ಇದ್ದರು.
ತುರುವೇಕೆರೆ:ರಾಸಾಯನಿಕ ಮಿಶ್ರಿತ ಆಹಾರ ಸೇವನೆ ಕಣ್ಣು ಮತ್ತು ದೇಹದ ಆರೋಗ್ಯಕ್ಕೆ ಹಾನಿಕಾರಕ ಎಂದು ಡಾ.ನಾಗರಾಜ್ ಸಲಹೆ ನೀಡಿದರು.
ತಾಲೂಕಿನ ಬಾಣಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್, ತಾಲೂಕು ಆರೋಗ್ಯ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಕೇಂದ್ರ ಮತ್ತು ಬೆಂಗಳೂರಿನ ಲಯನ್ಸ್ ಸೂಪರ್ ಸ್ಪೆಷಾಲಿಟಿ ಐ ಹಾಸ್ಪಿಟಲ್ವತಿಯಿಂದ ದಿ.ಶಾರದಮ್ಮ ನಾಗರಾಜು ಅವರ ಸ್ಮರಣಾರ್ಥ ಟಿ.ಎನ್.ಜಗದೀಶ್ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರಉದ್ಘಾಟಿಸಿ ಮಾತನಾಡಿ, ಆಧುನಿಕ ಪದ್ಧತಿಯ ಆಹಾರದಿಂದ ಮನುಷ್ಯನ ಆರೋಗ್ಯದ ಜೀವನಶೈಲಿ ಬದಲಾಗಿದೆ. ಬದಲಿಗೆ ಹಳೇ ಕಾಲದ ಆಹಾರ ಪದ್ಧತಿ ಅಳವಡಿಸಿಕೊಂಡಲ್ಲಿ ಮಾತ್ರ ಮುಂದೆ ಮನುಷ್ಯ ಆರೋಗ್ಯವಂತಜೀವನ ನಡೆಸಲು ಸಾಧ್ಯ. ಸೊಪ್ಪು, ಮೊಳಕೆಕಾಳು, ಉತ್ತಮವಾದ ತರಕಾರಿ, ಸಾವಯವ ಗೊಬ್ಬರ ಬಳಸಿ ಬೆಳೆದಆಹಾರ ಪದಾರ್ಥ ಸೇವನೆ ಮಾಡುವುದು ಆರೋಗ್ಯಕ್ಕೆ ಒಳಿತು. ದೈನಂದಿನ ವ್ಯಾಯಾಮ, ಉತ್ತಮ ಸಂಗೀತ ದೇಹಾರೋಗ್ಯವನ್ನು ಉಲ್ಲಸಿತಗೊಳಿಸುತ್ತದೆ ಎಂದರು.
ಬಾಣಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೀವ್ ಮಾತನಾಡಿ, ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವವರು ಕಡ್ಡಾಯವಾಗಿ ನೇತ್ರಪರೀಕ್ಷೆ ಮಾಡಿಸಿಕೊಳ್ಳಬೇಕು. ಉತ್ತಮ ಆಹಾರಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಲಯನ್ಸ್ ಕ್ಲಬ್ ಸಂಸ್ಥೆಯು ಹಲವಾರು ವರ್ಷಗಳಿಂದ ಸಾಮಾಜಿಕ ಸೇವೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಸಿ.ಸುನಿಲ್ ಬಾಬು ಮಾತನಾಡಿ, ಲಯನ್ಸ್ ಕ್ಲಬ್ ಸಂಸ್ಥೆಯು ಹತ್ತಾರು ವರ್ಷಗಳಿಂದ ಹಲವಾರು ಸೇವೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಲಯನ್ಸ್ ಕ್ಲಬ್ನ ಸರ್ವ ಸದಸ್ಯರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯ ಮಾಡುವ ಸಂಕಲ್ಪ ಹೊಂದಲಾಗಿದೆ ಎಂದರು.