ಯಾದಗಿರಿ ನಗರದ ಯುಡಾ ಕಚೇರಿಯಲ್ಲಿ ಶುಕ್ರವಾರ ಅಧ್ಯ ಬಾಬುರಾವ ಕಾಡ್ಲೂರ ಅಧ್ಯತೆಯಲ್ಲಿ ಸಭೆ ನಡೆಯಿತು. ಆಯುಕ್ತ ಉಮೇಶ ಚವ್ಹಾಣ್, ಶರಣಪ್ಪ ಮಡಿವಾಳ ಇತರರಿದ್ದರು.
- ಅಧಿಕಾರಿಗಳಿಗೆ ಅಧ್ಯ ಕಾಡ್ಲೂರ ಸೂಚನೆ
- ಎನ್ಎ ಲೇಔಟ್ಗಾಗಿ 27 ಅರ್ಜಿ
ಯಾದಗಿರಿ: ಎನ್ಎ ಮತ್ತು ಲೇಔಟ್ಗಾಗಿ ಬಂದ ಅರ್ಜಿಗಳ ದಾಖಲೆಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸಾಮಾನ್ಯ ಸಭೆಯ ಅಧ್ಯ$್ಕಷತೆ ವಹಿಸಿ ಮಾತನಾಡಿದ ಅವರು, ಅಗತ್ಯ ದಾಖಲೆ ಪಡೆದು ಯಾವುದೇ ತಕರಾರು, ತೊಂದರೆ ಇಲ್ಲದನ್ನು ಗಮನಿಸಿ ರ್ನಿಣಯ ತೆಗೆದುಕೊಳ್ಳುವುದಾಗಿ ಹೇಳಿದರು.
ಆರಂಭದಲ್ಲಿ ಎಲ್ಲರನ್ನೂ ಸ್ವಾಗತಿಸಿ, ಸಭೆಯ ನಡುವಳಿಕೆಗಳನ್ನು ಮಂಡಿಸಿದ ಯುಡಾ ಆಯುಕ್ತ ಉಮೇಶ ಚವ್ಹಾಣ್, ಕಳೆದ ಸಲದ ಸಾಮಾನ್ಯ ಸಭೆಯಲ್ಲಿ ವಿಷಯಸೂಚಿ ಅನ್ವಯ ಕೃಷಿ ವಲಯದಿಂದ ವಸತಿ ಉದ್ದೇಶಕ್ಕಾಗಿ ಭೂ ಉಪಯೋಗ ಬದಲಾವಣೆ ಮಾಡುವ ಕುರಿತಾಗಿ ಬಂದ ಅರ್ಜಿಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಎನ್ಎ ಮತ್ತು ಲೇಔಟ್ ನಿರ್ಮಾಣಕ್ಕಾಗಿ ಒಟ್ಟು 27 ಅರ್ಜಿ ಬಂದ ಬಗ್ಗೆ ಚರ್ಚೆ ಮಾಡಲಾಯಿತು. ಯಾವ ಏರಿಯಾ, ವಾರ್ಡ್ ಮತ್ತು ಹೊರವಲಯದಲ್ಲಿ ಇದಕ್ಕಾಗಿ ಬಂದ ಅರ್ಜಿ ಬಗ್ಗೆ ಅಧ್ಯ ಕಾಡ್ಲೂರ್ ಅವರು ಆಯುಕ್ತರ ಬಳಿ ಸಮಗ್ರ ಮಾಹಿತಿ ಪಡೆದರು. ಎನ್ಎ ಮತ್ತು ಲೇಔಟ್ಗಾಗಿ ಬಂದ ಅರ್ಜಿಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಪಡೆದು ಯಾವುದೇ ತಕರಾರು, ತೊಂದರೆ ಇಲ್ಲದನ್ನು ಗಮನಿಸಿ ರ್ನಿಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಒಟ್ಟು 27 ಅರ್ಜಿಗಳ ವರದಿಯನ್ನು ಆಯುಕ್ತ ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಟಿಎಂಪಿ ಶರಣಪ್ಪ ಮಡಿವಾಳ, ಯುಡಾ ಸದಸ್ಯರಾದ ಖಾಜಾ ಕಲಿಂ ಉದ್ದಿನ್ ಜೈನ್, ಮಂಜುನಾಥ, ಹೆಚ್ಚುವರಿ ಎಸ್ಪಿ ಧರಣೇಶ, ಆರೋಗ್ಯ, ಲೋಕೋಪಯೋಗಿ, ಜೆಸ್ಕಾಂ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಅಧಿಕಾರಿಗಳು ಇದ್ದರು.