Check on the well-being of newspaper distributors 
ರಾಜ್ಯ

ನಿರ್ಗತಿಕ ಜನರ ಸೇವೆಯಿಂದ ಸಾರ್ಥಕತೆ ಪ್ರಾಪ್ತಿ

ಪಾವಗಡ : ತಾಲೂಕಿನ ಗ್ರಾಮೀಣ ಭಾಗದ ಹಳ್ಳಿಗಾಡಿನ ಜನರಿಗೆ ಅನುಕೂಲವಾಗಲೆಂದು ಡಾ.ಪ್ರಭಾಕರ ರೆಡ್ಡಿ ತಾವು ಗಳಿಸಿದ ಹಣದಿಂದ ಆಂಬುಲೆನ್ಸ್ ಖರೀದಿಸಿ ಸೇವೆಗಾಗಿ ನೀಡಿರುವುದು ಸಾರ್ಥಕ ಕೆಲಸವಾಗಿದೆ ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಪೀಠಾಧ್ಯಕ್ಷ ಸ್ವಾಮಿ ಜಪಾನಂದಜೀ ಅಭಿಪ್ರಾಯಪಟ್ಟರು.
ಪಾವಗಡ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಸಂಟಿತ ಗ್ರಾವಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಪಾವಗಡದ ಡಾ.ಪ್ರಭಾಕರರೆಡ್ಡಿ ಎಜುಕೇಶನಲ್ ಮತ್ತು ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಸುಸಜ್ಜಿತ, ಹವಾನಿಯಂತ್ರಿತ ಆಂಬುಲೆನ್ಸ್ ವಾಹನದ (ಸಂಚಾರಿ ಆಸ್ಪತ್ರೆಯ) ಲೋಕಾರ್ಪಣಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ವಾತನಾಡಿದರು.
ಬಡ ನಿರ್ಗತಿಕ ಜನರ ಸೇವೆ ವಾಡಿ ಋಣ ತೀರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಡಾ.ಪ್ರಭಾಕರರೆಡ್ಡಿ ಅವರ ಸಾವಾಜಿಕ ಚಿಂತನೆ ಮತ್ತು ಸಾತ್ವಿಕ ಮನೋಭಾವ ಹಾಗೂ ಪರೋಪಕಾರ ಗುಣ ಮುಂದಿನ ಜನಾಂಗಕ್ಕೆ ವಾದರಿ ಎಂದರು.
ವೈದ್ಯ ಡಾ.ಚಕ್ಕರ ರೆಡ್ಡಿ ವಾತನಾಡಿ, ಆರೋಗ್ಯ ಭಾಗ್ಯಕ್ಕಿಂತ ಮಿಗಿಲಾದ ಭಾಗ್ಯವಿಲ್ಲ. ಜೀವನದಲ್ಲಿ ಏಳು ಅಂಶಗಳಾದ ಆಹಾರ, ನೀರು, ಗಾಳಿ, ವಿಶ್ರಾಂತಿ, ವ್ಯಾಯಾಮ ಮತ್ತು ಶುದ್ಧವಾದ ಮನಸ್ಸು ಈ ಎಲ್ಲ ವಿಚಾರಗಳನ್ನು ನಿಯಮಿತವಾಗಿ, ಸಮರ್ಪಕವಾಗಿ ಯಾರು ಪಾಲಿಸುತ್ತಾರೋ ಅವರಿಗೆ ಪ್ರಕೃತಿದತ್ತವಾಗಿ ಆರೋಗ್ಯ ಲಭಿಸುತ್ತದೆ ಎಂದರು.
ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಪೂಜಾರಪ್ಪ, ರೈತ ಸಂದ ಅಧ್ಯಕ್ಷ ನರಸಿಂಹ ರೆಡ್ಡಿ, ಡಾ.ಶ್ರೀಕಾಂತ್ ಪುವ್ವಾಡಿ, ಡಾ.ನರೇಂದ್ರ ಬಾಬು ಮತ್ತಿತರರು ಇದ್ದರು.