Kannada sahithya parishath
- * ಪ್ರಶಸ್ತಿಯು 30 ಸಾವಿರ ರೂ. ನಗದು ಒಳಗೊಂಡಿದೆ.
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನೀಡುವ ಚಾವುಂಡರಾಯ ದತ್ತಿ ಪ್ರಶಸ್ತಿಗೆ ಬಿ. ಚಂದ್ರಯ್ಯ (2024) ಹಾಗೂ ದೇವೇಂದ್ರಪ್ಪ ನಾಭಿರಾಜ ಅಕ್ಕಿ (2025) ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು 30 ಸಾವಿರ ರೂ. ನಗದು ಒಳಗೊಂಡಿದೆ. ಕಸಾಪ ಆಡಳಿತಾಧಿಕಾರಿ ಕೆ.ಎ. ದಯಾನಂದ ಅಧ್ಯಕ್ಷತೆಯಲ್ಲಿ ಡಾ.ಹಂಪ ನಾಗರಾಜಯ್ಯ ಮತ್ತು ಪದ್ಮರಾಜ ದಂಡಾವತಿ ಅವರನ್ನು ಒಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ. ಬಿ. ಚಂದ್ರಯ್ಯ ಅವರು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಲ್ಲಿ 30 ವರ್ಷ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ 15 ವರ್ಷ ಕಾರ್ಯನಿರ್ವಹಿಸಿದ್ದಾರೆ. ‘ಚಂದ್ರ ಕಿರಣ’, ‘ಗಮಕ ರೂಪಕ’ ಸೇರಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಡಿ.ಎನ್. ಅಕ್ಕಿ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವರಾಗಿದ್ದಾರೆ. ‘ಚಿಗುರು ಚಿಂತನ’, ‘ಸಗರನಾಡ ಸಿರಿ’, ‘ಹಡೆದವ್ವ ಹಾಡ್ಯಾಳ’ ಸೇರಿ ವಿವಿಧ ಕವನ ಸಂಕಲನಗಳನ್ನು ರಚಿಸಿದ್ದಾರೆ. ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಈ ದತ್ತಿಯನ್ನು ಸ್ಥಾಪಿಸಿದ್ದಾರೆ.