ಸುಕ್ಷೇತ್ರ ಉತ್ನಾಳ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ಪುರುಷೋತ್ತಮ ಮಾಸದ ಅಂಗವಾಗಿ ಶಹಾಪುರದ ಶ್ರೀಸೂಗೂರೇಶ್ವರ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ಒಂದು ಲಕ್ಷ ಗಾಯಿತ್ರಿ ಮಂತ್ರ ಜಪ, ಚಂಡಿಕಾ ಯಾಗ ನೆರವೇರಿಸಲಾಯಿತು. ಶ್ರೀಮಠದ ಶ್ರೀಶಿವಪುತ್ರಯ್ಯ ಸ್ವಾಮಿಗಳು ಉಪಸ್ಥಿತರಿದ್ದರು.  
ರಾಜ್ಯ

ಉತ್ನಾಳ ಕ್ಷೇತ್ರದಲ್ಲಿ ಲಕ್ಷ ಗಾಯಿತ್ರಿ ಮಂತ್ರ ಜಪ; ಚಂಡಿಕಾ ಯಾಗ

ಪ್ರಮುಖ ಮುಖ್ಯಾಂಶಗಳು

  • ಉತ್ನಾಳ ಕ್ಷೇತ್ರದಲ್ಲಿ ಲಕ್ಷ ಗಾಯಿತ್ರಿ ಮಂತ್ರ ಜಪ
  • ಶ್ರೀ ಮಹಾಲಕ್ಷ್ಮಿ ಮಂದಿರದಲ್ಲಿ ಚಂಡಿಕಾ ಯಾಗ
  • 50 ಜನ ಋತ್ವಿಜರಿಂದ ವಿವಿಧ ಧಾರ್ಮಿಕ ವಿಧಿ-ವಿಧಾನ

ಬಸವನಬಾಗೇವಾಡಿ:ಸುಕ್ಷೇತ್ರಉತ್ನಾಳ ಶ್ರೀಮಹಾಲಕ್ಷ್ಮಿಶಕ್ತಿಪೀಠದಲ್ಲಿ ಉತ್ತಮ ಮಳೆ,ಬೆಳೆ ಹಾಗೂ ಲೋಕಕಲ್ಯಾಣಾರ್ಥವಾಗಿ ಒಂದು ಲಕ್ಷಗಾಯತ್ರಿ ಮಂತ್ರ ಜಪ ಮತ್ತು ಚಂಡಿಕಾಯಾಗವನ್ನು ನೆರವೇರಿಸಲಾಯಿತು.

ಶ್ರೀಮಠದಶ್ರೀಶಿವಪುತ್ರಯ್ಯ ಸ್ವಾಮಿಗಳುಹಾಗೂ ಮಾತೋಶ್ರೀ ಶಶಿಕಲಾ ಅಮ್ಮನವರಸಂಕಲ್ಪದಂತೆ ಶಹಾಪುರ ಮಠದಶ್ರೀಸೂಗೂರೇಶ್ವರ ಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ಎರಡುದಿನ ನಡೆದ ಸುದೀರ್ಘ ಜಪಯಜ್ಞದಲ್ಲಿಸುಮಾರು 60 ಶಾಸಿಗಳುಪಾಲ್ಗೊಂಡು ಧಾರ್ಮಿಕ ವಿಧಿ-ವಿಧಾನಗಳನ್ನುನೆರವೇರಿಸಿದರು.

ಬೆಳಗಾವಿಜಿಲ್ಲೆಯ ಚಿಕ್ಕೋಡಿ ತಾಲೂಕಿನಪ್ರಸಿದ್ಧ ಯಡೂರ ಕ್ಷೇತ್ರದಶ್ರೀಸಿದ್ಧಲಿಂಗ ಶಿವಾಚಾರ್ಯಸಂಸ್ಕೃತ ಮತ್ತು ವೇದಾಗಮ ಪಾಠಶಾಲೆಯಶಾಸಿಗಳು ಒಬ್ಬೊಬ್ಬರು 2ಸಾವಿರ ಗಾಯಿತ್ರಿಮಂತ್ರವನ್ನು ಜಪಿಸಿದರು.50 ಜನ ಶಾಸಿಗಳುತಲಾ 2 ಸಾವಿರಗಾಯಿತ್ರಿ ಜಪದಂತೆ ಒಟ್ಟು ಒಂದುಲಕ್ಷ ಜಪವನ್ನು ನೆರವೇರಿಸಿದರು.ನಂತರ ಶ್ರೀಸೂಗೂರೇಶ್ವರಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿಚಂಡಿಕಾ ಯಾಗವನ್ನು ನೆರವೇರಿಸಿದರು.ಇದೇ ವೇಳೆ ನವಗ್ರಹಶಾಂತಿ, ಉಮಾಮಹೇಶ್ವರಪೂಜೆ, ಶ್ರೀಚಕ್ರಕ್ಕೆಸಹಸ್ರ ಕುಂಕುಮಾರ್ಚನೆ, ಕ್ಷೇತ್ರದಶಕ್ತಿಮಾತೆ ಮಹಾಲಕ್ಷಿದೇವಿಗೆವಿಶೇಷ ಅಭಿಷೇಕ ಅಲಂಕಾರ ಮಾಡಿಪೂಜೆ ಸಲ್ಲಿಸಲಾಯಿತು. ಪುರುಷೋತ್ತಮಮಾಸದ ಅಂಗವಾಗಿ 33ಮುತ್ತೈದೆಯರಿಗೆಉಡಿ ತುಂಬಲಾಯಿತು.ನಂತರ ಜಂಗಮ ದಾಸೋಹನೆರವೇರಿಸಿ ಎಲ್ಲ ಭಕ್ತರಿಗೆಮಹಾಪ್ರಸಾದ ವಿತರಿಸಲಾಯಿತು.ಶ್ರೀಮಹಾಲಕ್ಷ್ಮಿಪಬ್ಲಿಕ್ ಶಾಲೆಯ ಸಂಗಮೇಶ್ ಹಿರೇಮಠ,ಶ್ರೀಮಹಾಲಕ್ಷ್ಮಿಆಯುರ್ವೇದ ಆಸ್ಪತ್ರೆಯ ಡಾ.ಮಹಾಂತೇಶ್ ಹಿರೇಮಠವಿವಿಧೆಡೆಯಿಂದ ಆಗಮಿಸಿದ್ದಭಕ್ತರು ಪಾಲ್ಗೊಂಡಿದ್ದರು.