Changing society through writing 
ರಾಜ್ಯ

ಬರವಣಿಗೆಯಿಂದ ಸಮಾಜ ತಿದ್ದಿ

ತುಮಕೂರು ಡೆಸ್ಕ್
ಗುಬ್ಬಿ: ಪತ್ರಕರ್ತರು ಸಮಾಜದ ತಪು$್ಪಗಳನ್ನು ತಿದ್ದುವ ವೃತ್ತಿ ಧರ್ಮವನ್ನು ಪಾಲಿಸುತ್ತ ರಾಜಕಾರಣಿಗಳು ಹಾಗೂ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಉತ್ತಮ ಸಮಾಜ ಸೃಷ್ಟಿಗೆ ಕಾರಣವಾಗಬೇಕು ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ತಿಳಿಸಿದರು.
ಪಟ್ಟಣದ ತಾಪಂ ಆವರಣದಲ್ಲಿ ಆರಂಭವಾದ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಕಚೇರಿ ಹಾಗೂ 2025&-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಬಿಂಬಿಸುವ ಪತ್ರಕರ್ತರ ನಡವಳಿಕೆ, ಬರವಣಿಗೆ ಮೂಲಕ ಸಮಾಜವನ್ನು ತಿದ್ದಬೇಕು. ಆದರೆ ರೋಲ್​ ಕಾಲ್​ ಪತ್ರಕರ್ತರ ಸಂಖ್ಯೆ ಹೆಚ್ಚಾಗಿ ನೈಜ ಪತ್ರಕರ್ತರಿಗೂ ಕೆಟ್ಟ ಹೆಸರು ಬಂದಿದೆ ಎಂದು ವಿಷಾದಿಸಿದರು.
ತಾಲೂಕು ಸಂಘದ ಪತ್ರಿಕಾ ಭವನ ನಿಮಾರ್ಣಕ್ಕೆ ಸಿಎ ಸೈಟ್​ ನೀಡಲು ಜಿಲ್ಲಾಧಿಕಾರಿಗಳ ಜತೆ ಚರ್ಚಿಸುತ್ತೇನೆ ಹಾಗೂ ನಿವೇಶನರಹಿತ ಪತ್ರಕರ್ತರಿಗೆ ಸೈಟ್​ ಮಂಜೂರು ಆಯಾ ಗ್ರಾಮದಲ್ಲಿಯೇ ಮಾಡಲು ಸರ್ಕಾರದ ಜತೆ ಮಾತನಾಡುತ್ತೇನೆ. ಗ್ರಾಮೀಣ ಪತ್ರಕರ್ತರ ಬಸ್​ ಪಾಸ್​ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್​ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ಬದ್ಧತೆಯಲ್ಲಿ ಸಾಗಬೇಕಿದೆ. ನೈಜ ವರದಿ ಜತೆಗೆ ಉತ್ತಮ ಸಮಾಜ ನಿಮಾರ್ಣಕ್ಕೆ ಆದ್ಯತೆ ನೀಡಬೇಕು. ಸರ್ಕಾರದ ಯಾವುದೇ ಕಾರ್ಯಕ್ರಮ ಹಾಗೂ ಯೋಜನೆ ಸಫಲವಾಗಲು ಪತ್ರಕರ್ತರ ಸಹಕಾರ ಅಗತ್ಯವಿದೆ ಎಂದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಲ್​.ಯೋಗೇಶ್​ ಮಾತನಾಡಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷ ಎಲ್​.ಯೋಗೇಶ್​ ಪ್ರತಿಜ್ಞಾ ವಿಧಿ ಬೋಧಿಸಿ, ಪ್ರಮಾಣಪತ್ರ ವಿತರಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ, ಜಿಲ್ಲಾ ಕಾರ್ಯದರ್ಶಿ ಸತೀಶ್​ ಹಾರೋಗೆರೆ, ಜಿಲ್ಲಾ ನಿರ್ದೇಶಕ ಯೋಗೀಶ್​ ಮೆಳೆಕಲ್ಲಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಂಜಯ್​, ಹಿರಿಯ ನಿರ್ದೇಶಕ ಆಂಜಿನಪ್ಪ ಇದ್ದರು.