ದೊಡ್ಡಬಳ್ಳಾಪುರದ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದಿಂದ ಹೃದಯಾಘಾತ ಮತ್ತು ತುರ್ತು ಚಿಕಿತ್ಸೆ ಜಾಗೃತಿ ಮತ್ತು ಕ್ಯಾನ್ಸರ್​ ಅರಿವು ಕಾರ್ಯಕ್ರಮಕ್ಕೆ ಮಹಿಳಾ ಸಮಾಜದ ಅಧ್ಯೆ ಎಂ.ಕೆ ವತ್ಸಲಾ ಚಾಲನೆ ನೀಡಿದರು. ಕನ್ನಡ ವೈದ್ಯ ಬರಹಗಾರರ ಸಮಿತಿಯ ಅಧ್ಯೆ ಡಾ.ಇಂದಿರ ಶ್ಯಾಮ್​ ಪ್ರಸಾದ್​, ತುರ್ತು ಚಿಕಿತ್ಸಾ ವಿಭಾಗದ ಪರಿಣಿತ ಡಾ.ಮಹೇಶ್​ ಮೈಲಾರಪ್ಪ, ಸ್ರಿ$್ತ ರೋಗ ತ ಡಾ.ಮಾಲಾ ವಿಜಯ ಕುಮಾರ್​ ಇದ್ದರು.  
ರಾಜ್ಯ

ಬದಲಾದ ಜೀವನ ಶೈಲಿ ಹೃದಯಾಘಾತಕ್ಕೆ ಕಾರಣ / DODDABALLAPUR

ದೊಡ್ಡಬಳ್ಳಾಪುರ : ನಾವು ಸೇವಿಸುವ ಆಹಾರದ ಜತೆಗೆ ದೈನಂದಿನ ಚಟುವಟಿಕೆಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಸಮುದಾಯ ಆರೋಗ್ಯ ತ ಡಾ.ಎಚ್​.ಜಿ. ವಿಜಯ ಕುಮಾರ್​ ಹೇಳಿದರು.
ನಗರದ ಬಸ್​ ನಿಲ್ದಾಣದ ಬಳಿಯಿರುವ ಮಹಿಳಾ ಸಮಾಜ ಕಸ್ತೂರಿ ಬಾ ಶಿಶು ವಿಹಾರದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಹೃದಯಾಘಾತ ಮತ್ತು ತುರ್ತು ಚಿಕಿತ್ಸೆ ಜಾಗೃತಿ ಮತ್ತು ಕ್ಯಾನ್ಸರ್​ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾಜಿಕ ಮಾಧ್ಯಮಗಳಲ್ಲಿ ಹೃದಯಾಘಾತದ ಸುದ್ದಿಗಳು ಹೆಚ್ಚಾಗಿ ಕಂಡುಬರುತ್ತಿದೆ. ಮಾಧ್ಯಮಗಳಲ್ಲಿ ಹರಿದಾಡುವ ಸುದ್ದಿಗಳಿಂದಲೂ ಜನರು ಆತಂಕಕ್ಕೀಡಾಗುತ್ತಿದ್ದಾರೆ. ಹೃದಯಾಘಾತ ಕೇವಲ ನಿನ್ನೆ ಮೊನ್ನೆಯದಷ್ಟೇ ಅಲ್ಲ, ಮೊದಲಿನಿಂದಲೂ ಇದೆ.
ಕರೊನಾದಿಂದ ಹೃದಯಾಘಾತ ಹೆಚ್ಚಾಯಿತು ಎಂಬ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಆದರೆ, ಕರೊನಾಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ. ಹೃದಯಾಘಾತಕ್ಕೆ ಇಂದಿನ ಜೀವನ ಶೈಲಿ ಪ್ರಮುಖ ಕಾರಣವಾಗಿದೆ. ಹಿಂದಿನ ಆಹಾರ ಪದ್ಧತಿ, ಈಗಿನ ಆಹಾರ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ತಿಂಗಳಿಗೆ 150ರಷ್ಟು ಹೃದಯಾಘಾತ ಪ್ರಕರಣ ಕಂಡುಬರುತ್ತಿದೆ. ಇದಕ್ಕೆ ವಂಶಾವಳಿಯೂ ಕಾರಣ. ಹಾಗೆಯೇ, ಜನರು ಅತಿಯಾಗಿ ಬಳಸುತ್ತಿರುವ ಎಣ್ಣೆ, ಸಕ್ಕರೆ, ಅನ್ನ ಸೇವನೆ ಇವುಗಳಿಂದ ಹೆಚ್ಚಾಗಿ ಹೃದಯಾಘಾತ ಕಂಡುಬರುತ್ತಿದೆ. ಪ್ರಮುಖವಾಗಿ ಒತ್ತಡದ ಬದುಕಿನಿಂದ ಹೃದಯಾಘಾತವಾಗುತ್ತಿದೆ. ಕ್ಯಾನ್ಸರ್​ನಂತಹ ಕಾಯಿಲೆಗಳಿಗೆ ಇದು ಸಹ ಕಾರಣವಾಗಿದೆ ಎಂದರು.

ಮದ್ಯಪಾನ ಹಾಗೂ ಧೂಮಪಾನದಿಂದ ಸಾಕಷ್ಟು ಹೃದಯಾಘಾತ ಪ್ರಕರಣಗಳು ದಾಖಲಾಗುತ್ತಿದೆ. ಇದಕ್ಕೆ ಪರಿಹಾರೋಪಯವಾಗಿ ತರಕಾರಿ, ಹಣ್ಣು, ಸೊಪ್ಪುಗಳನ್ನು ಯಥೇಚ್ಛವಾಗಿ ಸೇವಿಸುವುದು ಬಹಳ ಅಗತ್ಯ. ಹೃದಯಾಘಾತದ ಸಣ್ಣ ಸುಳಿವು ಸಿಕ್ಕರೂ ತಡಮಾಡದೆ ಕೂಡಲೇ ತಪಾಸಣೆ ಮಾಡಿಸುವುದು ಅತ್ಯಗತ್ಯ.