ಬೆಲಹೊಂಗಲ ನಗರದಲ್ಲಿ ಶ್ರೀ ಚಕ್ರಸಮೇತ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಡಾ. ಜಿ.ಬಿ.ಮಲ್ಲೇಶಿ, ಜಿ.ಬಿ.ಬಾಬು, ಪ್ರಭುನೀಲಕಂಠ ಸ್ವಾಮೀಜಿ, ಡಾ. ಮಹಾಂತೇಶ ಶಾಸ್ತ್ರಿ ಆರಾದ್ರಿಮಠ, ಈರಣ್ಣ ಕಡಾಡಿ, ಮಹಾಂತೇಶ ಕೌಜಲಗಿ, ಡಾ.ವಿಶ್ವನಾಥ ಪಾಟೀಲ, ವಿಜಯ ಮೆಟಗುಡ್ಡ, ಮಹಾಂತೇಶ ಕೌಜಲಗಿ ಇತರರು ಇದ್ದರು.
ಬೆಲಹೊಂಗಲ: ಸಮೀಪದ ಮರಕುಂಬಿಯ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಬೆಲಹೊಂಗಲ ನಗರದಿಂದ ಮರಕುಂಬಿ ದೇವಸ್ಥಾನದ ವರೆಗೆ ದೇವಿಯ ಅಂಬಾರಿ ಮೆರವಣಿಗೆ, ಮೆಸೂರು ದಸರಾ ಶೆಲಿಯಲ್ಲಿ ವಿಜೃಂಭಣೆಯಿಂದ ಬುಧವಾರ ಜರುಗಿತು.
ಹೂವಿನ ಅಲಂಕಾರ, ಮಂಗಳವಾದ್ಯಗಳ ಸದ್ದಿನೊಂದಿಗೆ ಸಾಗಿದ ಅಂಬಾರಿ ಮೆರವಣಿಗೆ ಊರನ್ನೇ ಹಬ್ಬದ ಹೊಳಪಿನಲ್ಲಿ ಮುಳುಗಿಸಿತು. ವಿವಿಧ ವಾದ್ಯ ಮೇಳಗಳ ನಿನಾದ ಮುಗಿಲುಮುಟ್ಟುವಂತಿತ್ತು. ಭಕ್ತರು ಹಷೋರ್ದ್ಗಾರದ ಅಲೆಯಲ್ಲಿ ತೇಲಿದರು. ಬೆಲಹೊಂಗಲ ಎಪಿಎಂಸಿ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಧರ್ಮದರ್ಶಿ ಡಾ.ಜಿ.ಬಿ.ಮಲ್ಲೇಶಿ, ಕಾರ್ಯದರ್ಶಿ ಜಿ.ಬಿ.ಬಾಬು, ಪ್ರಭುನೀಲಕಂಠ ಸ್ವಾಮೀಜಿ, ಡಾ.ಮಹಾಂತೇಶ ಶಾಸಿ ಆರಾದ್ರಿಮಠ, ವೀರಯ್ಯಸ್ವಾಮಿ ಹಿರೇಮಠ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಉದ್ಯಮಿ ವಿಜಯ ಮೆಟಗುಡ್ಡ, ಭೂದಾನಿ ಮಹಾಂತೇಶ ಕೌಜಲಗಿ, ಈಶ್ವರ ಕೌಜಲಗಿ, ಕನ್ನಡಪರ ಸಂಟನೆ ಮುಖಂಡ ಮಹಾಂತೇಶ ತುರಮರಿ, ಮುಖಂಡ ಕಾರ್ತಿಕ ಪಾಟೀಲ, ನವೀನ ಪಾಟೀಲ, ಮಹಾಂತೇಶ ಮತ್ತಿಕೊಪ್ಪ, ಶಂಕರ ಮಾಡಲಗಿ, ಈಶ್ವರ ಕೊಪ್ಪದ, ಎ್.ಎಸ್.ಸಿದ್ದನಗೌಡರ, ರವಿ ಕುರಬೇಟ, ವಿರೂಪಾ ವಾಲಿ ಸೇರಿ ಗಣ್ಯರು ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು.
ಎಪಿಎಂಸಿ ಗಣಪತಿ ದೇವಸ್ಥಾನದಿಂದ ಆರಂಭವಾದ ಅಂಬಾರಿ ಮೆರವಣಿಗೆ ಇಂಚಲ ರಸ್ತೆ, ಕೇಂದ್ರ ಬಸ್ ನಿಲ್ದಾಣ, ರಾಯಣ್ಣ ವತ್ತ, ಮುರಗೋಡ ರಸ್ತೆ ಮೂಲಕ ಸಾಗುತ್ತಾ ಮರಕುಂಬಿ ತಲುಪಿತು. ಮೆಸೂರು ಅಂಬಾರಿ ಶೆಲಿ ನೆನಪಿಸುವಂತೆ ಶಿಸ್ತುಬದ್ಧ ಸಾಲು, ಕಂಗೊಳಿಸುವ ಕಲಾ ತಂಡಗಳ ವೇಷಭೂಷಣ ಮತ್ತು ನಾದಸ್ವರ, ಚಂಡೆ ಮದ್ದಳೆಗಳ ಮದಂಗನಾದ ಜನಮನ ಸೆಳೆಯಿತು.
ಮೆರವಣಿಗೆಯುದ್ದಕ್ಕೂ ಶಿರಾದ ಜಂಜಪ್ಪ ಅಲುಗು ಕುಣಿತ, ದುರಸತ್ತಿಕೊಪ್ಪ ಜಗ್ಗಲಗಿ ಮೇಳ, ನಿಟ್ಟೂರು ವೀರಭದ್ರ ಕುಣಿತ, ಕೇರಳದ ಚಂಡಿ ಮೇಳ, ಛಬ್ಬಿ ದೊಡ್ಡಾಟ, ಗೊಂಬೆ ಕುಣಿತ, ಹಾವೇರಿ ಡೊಳ್ಳು ಮೇಳ, ಹಾರೋಳ್ಳಿ ವನಕೆ ಕುಣಿತ ಸೇರಿ ಅನೇಕ ಜನಪದ ಕಲಾಮೇಳಗಳು ಒಂದರ ನಂತರ ಒಂದಾಗಿ ಪ್ರದರ್ಶನ ನೀಡಿದವು. ಅಂಬಾರಿಯ ಜತೆಗೆ ಬಸವಪ್ಪನವರನ್ನು (ವಿಶೇಷತೆ ಹೊಂದಿದ ಎತ್ತು) ಭಕ್ತರು ರಸ್ತೆಯುದ್ದಕ್ಕೂ ನೀರು ಹಾಗೂ ಹೂಮಾಲೆ ಹಾಕಿ ಶ್ರದ್ಧಾಭಕ್ತಿಯಿಂದ ನಮಸ್ಕರಿಸಿದರು. ಸಹಸ್ರಾರು ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಚಂದನ ಕೌಜಲಗಿ, ರಾಹುಲ ಕೌಜಲಗಿ, ವಿನೋದ ಮಠಪತಿ, ವಿಜಯ ಮಠಪತಿ, ಗದಗಯ್ಯ ಆರಾದ್ರಿಮಠ, ಮಹೇಶ ಕಾಜಗಾರ, ಶಿವಾನಂದ ಪಾಟೀಲ, ಸೋಮಗೌಡ ಪಾಟೀಲ, ಬೆಲಹೊಂಗಲ, ಮರಕುಂಬಿ, ಗೌಡಗೆರೆ ವಿವಿಧೆಡೆ ಭಕ್ತರು ಇದ್ದರು.