'Champion Club' Award for Kolar Rotary Club
ಆರೋಗ್ಯ, ಶಿಕ್ಷಣ, ಪರಿಸರ, ಮಹಿಳಾ ಸಬಲೀಕರಣ, ಕಾಮಧೇನು ಯೋಜನೆ ಸೇರಿ 200ಕ್ಕೂ ಹೆಚ್ಚು ಸಮಾಜ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಹಿನ್ನೆಲೆಯಲ್ಲಿ ಕೋಲಾರ ರೋಟರಿ ಕ್ಲಬ್ಗೆ ರೋಟರಿ 3191 ಸಂಸ್ಥೆಯು ಪ್ರತಿಷ್ಠಿತ "ಚಾಂಪಿಯನ್ ಕ್ಲಬ್ ಪ್ರಶಸ್ತಿ' ಸೇರಿ 17 ಅವಾರ್ಡಗಳನ್ನು ನೀಡಿ ಗೌರವಿಸಿದೆ ಎಂದು ಜಿಲ್ಲಾ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಎಸ್.ಎಂ. ಚಂದ್ರಶೇಖರ್ ತಿಳಿಸಿದರು.
ರೋಟರಿ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬರೂ ಸೇವಾ ಮನೋಭಾವದಿಂದ ವಿವಿಧ ೇತ್ರಗಳಲ್ಲಿ ಸಲ್ಲಿಸಿದ ಗಣನೀಯ ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ 7 ಸ್ಟಾರ್ ಪ್ಲಾಟಿನಂ ಪ್ರೆಸಿಡೆಂಟ್ ಅವಾರ್ಡ್, ಡೈಮಂಡ್ ಅವಾರ್ಡ್, ಬೆಸ್ಟ್ ಗ್ರಾಮೀಣ ಕ್ಲಬ್ ಅವಾರ್ಡ್ ಸೇರಿ 17 ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕ್ಲಬ್ನ ಗೌರವ ಹೆಚ್ಚಾಗಿದೆ ಎಂದರು.
ವಲಯ ಪ್ರಾಂತಪಾಲ ಎಚ್.ರಾಮಚಂದ್ರಪ್ಪ, ರೋಟೆರಿಯನ್ಗಳಾದ ಸಿ.ಆರ್.ಅಶೋಕ್, ನಾಗನಂದ ಕೆಂಪರಾಜ್, ರಮೇಶ್ ಕುಮಾರ್, ಶ್ರೀನಿವಾಸರೆಡ್ಡಿ, ವೆಂಕಟೇಶಪ್ಪ, ರಂಗೇಗೌಡ, ಸಿ.ಕೆ. ನಾಗೇಶ್, ಶಿವಪ್ಪ, ಚಂದ್ರು ಇದ್ದರು.