ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸಿಬಿಎಸ್‌ಇ,ಸಿಐಎಸ್‌ಸಿಇಮತ್ತು ಇತರೆ ರಾಜ್ಯ ಪರೀಕ್ಷಾಮಂಡಳಿಗಳಿಂದ 12ನೇತರಗತಿಯಲ್ಲಿ ಉತ್ತೀರ್ಣರಾದಅಭ್ಯರ್ಥಿಗಳಿಗೆ ತಮ್ಮ ಅಂಕಗಳನ್ನುಪರಿಶೀಲಿಸಿ ದೃಢೀಕರಿಸಲು ಹಾಗೂಅಂಕಪಟ್ಟಿ ಅಪ್ ಲೋಡ್ ಮಾಡಲುಕರ್ನಾಟಕ ಪರೀಕ್ಷಾ ಪ್ರಾಧಿಕಾರವೆಬ್ ಸೈಟ್‌ನಲ್ಲಿ ಲಿಂಕ್ ಬಿಡುಗಡೆಮಾಡಿದೆ.
ನಿಗದಿತಲಿಂಕ್ ಮೂಲಕ ಲಾಗಿನ್ ಆದ ತಕ್ಷಣಅಭ್ಯರ್ಥಿಗಳಿಗೆ ತಮ್ಮ ಅಂಕಗಳುಪ್ರದರ್ಶನವಾಗುತ್ತದೆ.ಅವು ಸರಿ ಇದ್ದರೆದೃಢೀಕರಿಸಬೇಕು.ಒಂದು ವೇಳೆಇದುವರೆಗೂ ಅಂಕಗಳನ್ನು ನಮೂದಿಸದೇಇದ್ದರೆ ಅಂತಹವರು ಕೂಡ ಅಂಕಗಳನ್ನುದಾಖಲಿಸಬಹುದು.ನಂತರ ಅದಕ್ಕೆಪೂರಕವಾದ ಅಂಕಪಟ್ಟಿಯನ್ನು ಅಪ್ಲೋಡ್ ಮಾಡಬೇಕು.ಇದೆಲ್ಲ ಮಾಡಲುಮೇ 24ರವರೆಗೂಅವಕಾಶ ನೀಡಲಾಗಿದೆ ಎಂದು ಪ್ರಾಧಿಕಾರದಕಾರ್ಯನಿರ್ವಾಹಕ ನಿರ್ದೇಶಕಹೆಚ್.ಪ್ರಸನ್ನತಿಳಿಸಿದ್ದಾರೆ.
ಅಭ್ಯರ್ಥಿಗಳುಧೃಡೀಕರಿಸಿ ಸಲ್ಲಿಸುವ ಅಂಕಗಳನ್ನೇನಿಯಮಾನುಸಾರ ಮೆರಿಟ್ ನಿರ್ಧರಿಸಲುಉಪಯೋಗಿಸಲಾಗುವುದು ಹಾಗೂ ಸೀಟುಹಂಚಿಕೆಯ ನಂತರ ಆಯಾ ಕಾಲೇಜಿನಲ್ಲಿಪ್ರವೇಶ ಪಡೆಯುವ ಸಂದರ್ಭದಲ್ಲಿಅಂಕಗಳನ್ನು ಪರಿಶೀಲಿಸಲಾಗುವುದು.ಅಭ್ಯರ್ಥಿಗಳುತಪ್ಪು ಮಾಹಿತಿ ನೀಡಿದಲ್ಲಿ ಸೀಟುರದ್ದುಗೊಳ್ಳುತ್ತದೆ ಮತ್ತುಅಭ್ಯರ್ಥಿತನವನ್ನು ತೆಗೆದುಹಾಕಲಾಗುವುದು.2026 ಹಾಗೂ ಅದಕ್ಕಿಂತಮೊದಲಿನ ವರ್ಷಗಳಲ್ಲಿ ಉತ್ತೀರ್ಣರಾದವರುಕೂಡ ಅಂಕಗಳನ್ನು ದಾಖಲಿಸಬಹುದು.ರಾಜ್ಯ ಪಠ್ಯಕ್ರಮದಲ್ಲಿಓದಿದ ಅಭ್ಯರ್ಥಿಗಳ ಅಂಕಗಳ ವಿವರವನ್ನುಆನ್ ಲೈನ್ ಮೂಲಕ ಪದವಿ ಪೂರ್ವಶಿಕ್ಷಣ ಇಲಾಖೆಯಿಂದ ಲಭ್ಯವಾಗಲಿದೆ.ಹೀಗಾಗಿ ರಾಜ್ಯಮಂಡಳಿಯ ಅಭ್ಯರ್ಥಿಗಳು ಅಂಕದಾಖಲಿಸುವ ಅಗತ್ಯ ಇಲ್ಲ ಎಂದುಪ್ರಸನ್ನ ಸ್ಪಷ್ಟಪಡಿಸಿದ್ದಾರೆ.