- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜನೆ
ಕಲಬುರಗಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎ.ಬಿ.ವಿ.ಪಿ) ಕಲಬುರಗಿ ವಿಭಾಗದ ವತಿಯಿಂದ ದ್ವೀತಿಯ ಪಿಯುಸಿ ವಿಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಉಚಿತ ತರಬೇತಿ ಮಾರ್ಚ್ 23ರಿಂದ ಶುರು ಮಾಡಲಾಗುತ್ತಿದೆ.
ಈ ತರಬೇತಿ ಕಾರ್ಯಕ್ರಮವು ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಇಟಿ ಪರೀೆಗೆ ಸಮರ್ಪಕವಾಗಿ ಸಿದ್ಧರಾಗಲು ನೆರವಾಗುವ ಉದ್ದೇಶದಿಂದ ನಡೆಸಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಶಿಣ ವ್ಯವಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆ ಕಾರಣದಿಂದ ಉತ್ತಮ ತರಬೇತಿ ಪಡೆಯಲು ಸಾಧ್ಯವಾಗದೆ ಹಿಂದುಳಿಯುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಒದಗಿಸಲು ಈ ತರಬೇತಿ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಯ ಮೂಲಕ ವಿದ್ಯಾರ್ಥಿಗಳಿಗೆ ಸಿಇಟಿ. ಪರೀೆಗೆ ಅಗತ್ಯವಾದ ವಿಷಯವಾರು ಮಾರ್ಗದರ್ಶನ, ಪರೀಾ ತಯಾರಿ ವಿಧಾನ ಹಾಗೂ ಸ್ಪರ್ಧಾತ್ಮಕ ಪರೀೆ ಕುರಿತು ಸಮಗ್ರ ಮಾಹಿತಿ ನೀಡಲಾಗುತ್ತದೆ. ಅನುಭವ ಹೊಂದಿದ ಉನ್ನತ ಶ್ರೇಣಿಯ ಪ್ರಾಧ್ಯಾಪಕರು ಹಾಗೂ ವಿಷಯ ತರು ಮಾರ್ಗದರ್ಶನ ನೀಡಲಿದ್ದಾರೆ.
ತರಬೇತಿಗೆ ಸೇರಲು ಪ್ರವೇಶ ಆರಂಭವಾಗಿದ್ದು, ಮಾರ್ಚ್ 23ರಂದು ಪಿಡಿಎ ಇಂಜಿನಿಯರಿಂಗ್ ಕಾಲೇಜು, ಸ್ಯಾಕ್ ಕಟ್ಟಡದಲ್ಲಿ ತರಗತಿ ಪ್ರಾರಂಭವಾಗಲಿವೆ.
ನಿತ್ಯ 6 ಗಂಟೆಗಳ ಬೋಧನೆ. ಉನ್ನತ ಶ್ರೇಣಿಯ ಅನುಭವಿ ಪ್ರಾಧ್ಯಾಪಕರಿಂದ ತರಗತಿಗಳು, ಪ್ರತಿ ವಿಷಯಕ್ಕೆ ಮುದ್ರಿತ ವಸ್ತುನಿಷ್ಠ ಪ್ರಶ್ನೆಪತ್ರಿಕೆಗಳನ್ನು ತರಗತಿಯಲ್ಲಿ ವಿತರಿಸಲಾಗುವುದು. ಹೊಸ ಪಠ್ಯಕ್ರಮದ ಪ್ರಕಾರ ಬೋಧನೆ. ಎರಡು ಮಾದರಿ ಪರೀೆ ನಡೆಸಲಾಗುವುದು.
ಈ ತರಬೇತಿ ಕಾರ್ಯಕ್ರಮದ ಮೂಲಕ ಗ್ರಾಮೀಣ ಹಾಗೂ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಶೈಣಿಕ ಗುರಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಎಬಿವಿಪಿ ವಿಭಾಗ ಕಾರ್ಯಲಯ ಕಾರ್ಯದರ್ಶಿ ಶ್ರವಣ ಕುಮಾರ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ. 7624906563, 6360921030, 8123386809, 9113031396ಗೆ ಸಂಪರ್ಕಿಸಬಹುದು.