ಔರಾದ್ ತಾಲೂಕಿನ ಹೆಡಗಾಪುರ ಜಾನುವಾರುಗಳ ತಳಿ ಸಂವರ್ಧನೆ ಕೇಂದ್ರಕ್ಕೆ ಬುಧವಾರ ಜಿಪಂ ಸಿಇಒ ಡಾ.ಗಿರೀಶ್ ಬದೋಲೆ ಭೇಟಿ ನೀಡಿ ಪರಿಶೀಲಿಸಿದರು. ಡಾ.ಗೌತಮ ಅರಳಿ, ತಾಪಂ ಇಒ ಕಿರಣ ಪಾಟೀಲ್, ಎಡಿ ಶಿವಕುಮಾರ ಘಾಟೆ, ಮಾಣಿಕರಾವ ಕೆರೂರು ಇತರರಿದ್ದರು.
ಔರಾದ್: ತಾಲೂಕಿನ ಹೆಡಗಾಪುರ ಗ್ರಾಮದಲ್ಲಿನ ಜಾನುವಾರುಗಳ ತಳಿ ಸಂವರ್ಧನೆ ಹಾಗೂ ರೈತರಿಗೆ ತರಬೇತಿ ನೀಡುವ ಕೇಂದ್ರಕ್ಕೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್ ಬದೋಲೆ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದ ವಿವಿಧ ಮೂಲಸೌಲಭ್ಯಗಳನ್ನು ವೀಸಿದ ಅವರು, ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಜಾನುವಾರುಗಳ ತಳಿ ಸುಧಾರಣೆ, ಹೈನುಗಾರಿಕೆ ಅಭಿವೃದ್ಧಿ, ಪಶುಪಾಲನಾ ಚಟುವಟಿಕೆಗಳ ವಿಸ್ತರಣೆ ಹಾಗೂ ರೈತರಿಗೆ ನೀಡಬಹುದಾದ ತರಬೇತಿ ಕಾರ್ಯಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು.ಜಾನುವಾರುಗಳಿಗೆ ಅಗತ್ಯವಾದ ಹಸಿರು ಮೇವು ಮತ್ತು ಒಣಮೇವಿನ ವ್ಯವಸ್ಥೆಯನ್ನು ಹೇಗೆ ಮಾಡಲಾಗುವುದು ಎಂಬುದರ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಜಲ ಶುದ್ಧೀಕರಣ ಕೇಂದ್ರ ಪರಿಶೀಲನೆ: ಬೆಳಕುಣಿ ಗ್ರಾಮದ ಜಲ ಶುದ್ಧೀಕರಣ ಕೇಂದ್ರಕ್ಕೆ ಸಿಇಒ ಬದೋಲೆ ಭೇಟಿ ನೀಡಿ ಪರಿಶೀಲಿಸಿ, ಕುಡಿಯುವ ನೀರಿನ ಶುದ್ಧೀಕರಣ ಪ್ರಕ್ರಿಯೆ, ಯಂತ್ರೋಪಕರಣಗಳ ಕಾರ್ಯನಿರ್ವಹಣೆ, ನೀರು ಸರಬರಾಜು ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಗ್ರಾಮಸ್ಥರಿಗೆ ಶುದ್ಧ ಹಾಗೂ ಸುರತ ಕುಡಿಯುವ ನೀರು ನಿರಂತರವಾಗಿ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಈ ವೇಳೆ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಸಿ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರಾದ ಮಾಣಿಕರಾವ ಕೆರೂರು, ಮಾರುತಿ ರಾಥೋಡ್, ತಾಪಂ ಇಒ ಕಿರಣ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪಿಡಿಒ ಆತ್ಮರಾಮ ಇತರರಿದ್ದರು.