Centre for competitive exam training inaugurated 
ರಾಜ್ಯ

ಶ್ರೀ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಕೇಂದ್ರ ಆರಂಭ

ತುಮಕೂರು ಡೆಸ್ಕ್
ಹುಳಿಯಾರು: ಎಸ್​ಡಿಸಿ, ಎಫ್​ಡಿಸಿ, ಪೊಲೀಸ್​, ಬ್ಯಾಂಕ್​ ಹೀಗೆ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಪಡೆದುಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭಿಸುವ ಚಿಂತನೆ ಮಾಡಲಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್​ಬಾಬು ತಿಳಿಸಿದರು.
ಹುಳಿಯಾರಿನ ಕೆಪಿಎಸ್​ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ವಾರ್ಷಿಕೋತ್ಸವದಲಿ ್ಲಮಾತನಾಡಿ, ತಾಲೂಕು ಈ ವರ್ಷ ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ತಾಲೂಕಿನ ಮಕ್ಕಳಿಗೆ ವಿಶೇಷ ಬೋಧನಾ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಎಂಬ ಭೇದಭಾವ ಮಾಡದೆ ಎಲ್ಲ ಶಾಲೆಯ ಮಕ್ಕಳಿಗೆ ತಾಲೂಕಿನ 10 ಕಡೆ ಸಂಜೀವಿನಿ ಶಿಬಿರ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಆಗದ ರ್ನಿಣಯವನ್ನು ಈ ವರ್ಷ ಸರ್ಕಾರ ತೆಗೆದುಕೊಂಡಿದೆ. ರಾಜ್ಯದ ಎಲ್ಲ ಮಕ್ಕಳೂ ಎಸ್​ಎಸ್​ಎಲ್​ಸಿಯಲ್ಲಿ ಉತ್ತೀರ್ಣರಾಗಬೇಕೆಂದು ಇತರ ರಾಜ್ಯಗಳಲ್ಲಿ ಅಧ್ಯಾಯನ ಮಾಡಿ ಈಗಾಗಲೇ ನಾಲ್ಕು ಪ್ರಶ್ನೆಪತ್ರಿಕೆ ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ 3 ಪ್ರಶ್ನೆಪತ್ರಿಕೆಗಳನ್ನು ಬಿಡುವವರಿದ್ದಾರೆ. ಈ 7 ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುವಷ್ಟು ಸಿದ್ಧರಾದರೆ ಎಲ್ಲರೂ ಖಂಡಿತ ಪಾಸಾಗಬಹುದು ಎಂದು ಸಲಹೆ ನೀಡಿದರು.
ಪಪಂ ಅಧ್ಯಕ್ಷೆ ಪ್ರೀತಿ ರಾಘವೇಂದ್ರ, ಸದಸ್ಯರಾದ ದಸ್ತುಗಿರಿಸಾಬ್​, ಬೀಬೀಫಾತೀಮಾ, ಎಸ್​ಡಿಎಂಸಿ ಉಪಾಧ್ಯಕ್ಷ ಪ್ರದಿಪ್​, ಸದಸ್ಯರಾದ ಚನ್ನಕೇಶವ, ಸರವಣ್​, ಶೇಖರ್​, ಗವೀರಂಗಪ್ಪ, ರವಿ, ರೂಪಾ, ಲತಾ, ಲಲಿತಾ, ಕಮಲಾ, ಬಾಲಾಜಿಸಿಂಗ್​, ಪ್ರಸನ್ನ, ಶೈಲಾ, ಹೇಮಾ ಮತ್ತಿತರರು ಇದ್ದರು.