ರಾಯಚೂರು ಕೇಂದ್ರ ಸರ್ಕಾರವು ಮನರೇಗಾ ಕಾಯ್ದೆಯನ್ನು ವಿರೂಪಗೊಳಿ ಕೂಲಿ ಕಾರ್ಮಿಕರ ದುಡಿಯುವ ಹಕ್ಕನ್ನು ಕಸಿದುಕೊಂಡಿದೆಂದು ಸಂಸದ ಜಿ.ಕುಮಾರ ನಾಯಕ ಆರೋಪಿಸಿದರು.
ನಗರದ ಸಂಸದರ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನೂರು ದಿನ ಉದ್ಯೋಗ ಖಾತ್ರಿ ಯೋಜನೆಯನ್ನು 125 ದಿನಗಳಿಗೆ ಹೆಚ್ಚಿಸುವದಾಗಿ ಸಮರ್ಥಿಸಿಕೊಳ್ಳುವ ಕೇಂದ್ರ ಸರ್ಕಾರ ವರ್ಷವಿಡಿ ಉದ್ಯೋಗ ದೊರೆಯುವದನ್ನು ತಡೆದಿದೆ. ಅಲ್ಲದೇ ಬೇಡಿಕೆ ಆಧಾರದ ಯೋಜನೆಯನ್ನು ಅವಶ್ಯಕತೆ ಆಧಾರದ ಮೇಲೆ ರೂಪಿತಗೊಳಿಸಿರುವದು ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಇಲ್ಲದಂತೆ ಮಾಡಿದೆ. ಇದರಿಂದ ವಿಕಸಿತ ಭಾರತ, ಉದ್ಯೋಗ ಖಾತ್ರಿ ಜೀವನೋಪಯೋಗಿ ಯೋಜನೆಯಿಂದ ಅಭಿವೃದ್ಧಿಯನ್ನು ಕಸಿದುಕೊಂಡಂತಾಗಿದೆಂದು ಆರೋಪಿಸಿದರು.
ಯುಪಿಎ ಸರ್ಕಾರದ ಆವಧಿಯಲ್ಲಿ ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು, ಶಿಕ್ಷಣ ಹಕ್ಕು ಕಾಯ್ದೆಯನ್ನು ರೂಪಿಸಿರುವ ಕ್ರಾಂತಿಕಾರಿ ಹೆಜ್ಜೆಯನ್ನು ಎನ್‌ಡಿಎ ಸರ್ಕಾರ ದಿಕ್ಕುತಪ್ಪಿಸುವ ಕಾರ್ಪೊರೇಟ್ ವಲಯಕ್ಕೆ ಪೂರಕವಾಗುವ ಚಿಂತನೆ ಹೊಂದಿದೆ. ರಾಮನ ಕುರಿತು ಪ್ರೀತಿ ತೋರಿಸುವ ಸರ್ಕಾರ ಜನರ ಹೃದಯದಲ್ಲಿರುವ ರಾಮನನ್ನು ಕಡೆಗಣಿಸಿದೆ. ಕಾಯ್ದೆ ಬದಲಾವಣೆ ಹಿಂದೆ ಕುಟೀಲ ನೀತಿಯಿದೆ ಎಂದರು.
90:10 ಅನುಪಾತದಲ್ಲಿ ಜಾರಿಗೊಳಿಸಲಾಗುತ್ತಿದ್ದ ಉದ್ಯೋಗ ಖಾತ್ರಿ ಯೋಜನೆಯನ್ನು 60:40 ಅನುಪಾತದಲ್ಲಿ ಜಾರಿಗೊಳಿಸಿದೆ. ಆದರೆ ಹಣಕಾಸು ಆಯೋಗದ ಶಿಫಾರಸ್ಸು ಕಡೆಗಣಿಸಿದೆ. ಕೊರತೆಯಾ ಗುವ ಆರ್ಥಿಕ ಮೂಲಕ ಸಮತೋಲನ ಮಾಡಲು ಸಮಸ್ಯೆಯನ್ನು ಕೇಂದ್ರವೇ ಸೃಷ್ಟಿಸಿದೆ ಎಂದರು.
ಯೋಜನೆ ಜಾರಿ ಮುನ್ನ ಆಯಾ ರಾಜ್ಯಗಳ ಅಭಿಪ್ರಾಯವೂ ಸೇರಿದಂತೆ ಪಾರ್ಲಿಮೆಂಟರಿ ಕಮಿಟಿ ಅಭಿಪ್ರಾಯವನ್ನು ಗೌರವಿಸದೇ ಹೋಗಿ ರಾತ್ರೋರಾತ್ರಿ ಯೋಜನೆ ರೂಪಿಸಿ ಜಾರಿಗೊಳಿಸಿ ದಂತಾಗಿದೆ. ಭವಿಷ್ಯದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಸ್ಥಿರತಗೊಳಿಸುವ ಪ್ರಯತ್ನ ನಡೆಯಲಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರವಿ ಬೋಸರಾಜು, ಮಹ್ಮದ ಶಾಲಂ, ಜಯಣ್ಣ, ಕೆ.ಶಾಂತಪ್ಪ, ಎನ್.ಶ್ರೀನಿವಾಸರೆಡ್ಡಿ, ಜಿ.ಶಿವಮೂರ್ತಿ, ಅಮರೇಗೌಡ ಹಂಚಿನಾಳ, ಯುವ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ ಇದ್ದರು.