ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಸೆಂಟ್ರಲ್ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರುಪ್ರಾದೇಶಿಕ ಕಚೇರಿಯು ಪೀಣ್ಯಾದ ಎಂಎಸ್‌ಎಂಇ ವಲಯದಲ್ಲಿ ಎಫ್‌ಕೆಸಿಸಿಐಸಹಭಾಗಿತ್ವದಲ್ಲಿ ಮೆಗಾ ಎಂಎಸ್‌ಎಂಇಶಿಬಿರವನ್ನು ಆಯೋಜಿಸಿತ್ತು.ಕಾರ್ಯಕ್ರಮದಲ್ಲಿವಿಭಿನ್ನ ಕ್ಷೇತ್ರಗಳ ಎಂಎಸ್‌ಎಂಇಉದ್ಯಮಿಗಳು,ಕೈಗಾರಿಕಾಪ್ರತಿನಿಧಿಗಳು,ಪ್ರಮುಖರುಭಾಗವಹಿಸಿದ್ದರು.
ಬ್ಯಾಂಕಿನಪ್ರಾದೇಶಿಕ ಮುಖ್ಯಸ್ಥ ಧಾರಾಸಿಂಗ್ನಾಯ್ಕ ಕಾರ್ಯಕ್ರಮಕ್ಕೆ ಆಗಮಿಸಿಮಾರ್ಗದರ್ಶನ ನೀಡಿದರು.ಪೀಣ್ಯಾ ಇಂಡಸ್ಟ್ರೀಸ್ಅಸೋಸಿಯೇಷನ್‌ಗೆ ಭೇಟಿ ನೀಡಿಅಧ್ಯಕ್ಷರಾದ ಡಿ.ಪಿ.ದಾನಪ್ಪಹಾಗೂ ಇತರೆ ಉದ್ಯಮಿಗಳೊಂದಿಗೆಸಂವಾದ ನಡೆಸಿದರು.
ಎಫ್‌ಕೆಸಿಸಿಐನಲ್ಲಿಎಂಎಸ್‌ಎಂಇ ಉದ್ಯಮಿಗಳನ್ನುದ್ದೇಶಿಸಿಮಾತನಾಡಿದ ಅವರು,ವೈಯಕ್ತಿಕೃತಹಣಕಾಸು ಪರಿಹಾರಗಳು,ಸರಳೀಕೃತ ಸಾಲಪ್ರಕ್ರಿಯೆಗಳು ಮತ್ತು ಸಕ್ರಿಯಗ್ರಾಹಕ ಸೇವೆಗಳ ಮೂಲಕ ಎಂಎಸ್‌ಎಂಇಕ್ಷೇತ್ರಕ್ಕೆ ಬೆಂಬಲ ನೀಡುವಬ್ಯಾಂಕಿನ ಬದ್ಧತೆಯನ್ನುವಿವರಿಸಿದರು.
ಎಫ್‌ಕೆಸಿಸಿಐಅಧ್ಯಕ್ಷೆ ಉಮಾರೆಡ್ಡಿ ಮೆಗಾಶಿಬಿರದಲ್ಲಿ ಪಾಲ್ಗೊಂಡು,ಎಂಎಸ್‌ಎಂಇಸಮುದಾಯಕ್ಕೆ ಸಮೀಪದಿಂದ ಬ್ಯಾಂಕಿಂಗ್ಸೇವೆಗಳನ್ನು ನೀಡುತ್ತಿರುವಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಕಾರ್ಯವನ್ನು ಶ್ಲಾಘಿಸಿದರು.ಎಂಎಸ್‌ಎಂಇ ಗಳುಆರ್ಥಿಕ ಬೆಳವಣಿಗೆ,ಹೊಸತನ ಮತ್ತುಉದ್ಯೋಗ ಸೃಷ್ಟಿಗೆ ನೀಡುವ ಮಹತ್ವದಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿಬ್ಯಾಂಕಿನ ಎಂಎಸ್‌ಎಂಇ ಉತ್ಪನ್ನಗಳಕುರಿತು ಮಾಹಿತಿ ನೀಡಲಾಯಿತು.ಜೊತೆಗೆ ಸಿಕೆವೈಸಿ, ಸಾಮಾಜಿಕ ಭದ್ರತಾಯೋಜನೆಗಳು,ಡಿಇಎಎಫ್ ಹಾಗೂಇತರೆ ಅಭಿಯಾನಗಳ ಕುರಿತು ಮಾಹಿತಿವುಳ್ಳಕರಪತ್ರ,ಬ್ಯಾನರ್‌ಗಳು,ಸ್ಟ್ಯಾಂಡಿಗಳನ್ನುಪ್ರದರ್ಶಿಸಲಾಯಿತು.
ಮೆಗಾಶಿಬಿರದ ಮೂಲಕ,ಬೆಂಗಳೂರುಕೈಗಾರಿಕಾ ಪ್ರದೇಶದಲ್ಲಿ ಎಂಎಸ್‌ಎಂಇಸಮುದಾಯದೊಂದಿಗೆ ಬ್ಯಾಂಕಿನಸಂಪರ್ಕವನ್ನು ಮತ್ತಷ್ಟುಬಲಪಡಿಸಿದ್ದು,ಸಣ್ಣ ಮತ್ತುಮಧ್ಯಮ ಕೈಗಾರಿಕೆಗಳನ್ನುಶಕ್ತಿಶಾಲಿಯಾಗಿಸುವ ನಿಟ್ಟಿನಲ್ಲಿಮಹತ್ವದ ಹೆಜ್ಜೆಯನ್ನಿರಿಸಿತು.