ರಾಜ್ಯ

ವೈಭವದ ನಾಡಹಬ್ಬ ಸಡಗರ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಗವಿಶ್ರೀಗಳಿಂದ ಇಂದು ಚಾಲನೆ

ಮೈಸೂರು: ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಶಕ್ತಿ & ಭಕ್ತಿಯ ಸಮ್ಮಿಲನವಾಗಿರುವ ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ (ಅ. 11) ಚಾಲನೆ ಸಿಗಲಿದೆ. ಚಾಮುಂಡಿ ಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲೂ ಸಕಲ ತಯಾರಿ ಪೂರ್ಣಗೊಂಡಿದ್ದು, ಬೆಳಗ್ಗೆ 11.50ರಿಂದ ಮಧ್ಯಾಹ್ನ 12.13ರ ಒಳಗೆ ಸಲ್ಲುವ ಶುಭ ಧನುರ್​ ಲಗ್ನದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಾಂಪ್ರದಾಯಿಕವಾಗಿ ಚಾಲನೆ ನೀಡಲಿದ್ದಾರೆ.

ಮುಖ್ಯಮಂತ್ರಿ ಆಗಿ ಡಿ.ಕೆ. ಶಿವಕುಮಾರ್​ ಅವರಿಗೆ ಇದು ಮೊದಲ ದಸರಾ ಆಗಿರುವುದು ವಿಶೇಷ. ಬರಗಾಲದ ನಡುವೆಯೂ ನಾಡಹಬ್ಬಕ್ಕಾಗಿ ಸಾಂಸ್ಕೃತಿಕ ನಗರಿ ಅದ್ದೂರಿಯಾಗಿ ಸಜ್ಜಾಗುತ್ತಿದೆ. ಮದುವಣಗಿತ್ತಿಯಂತೆ ಇಡೀ ಅರಮನೆ ನಗರ ದೀಪಾಲಂಕಾರಗಳಿಂದ ಥಳಥಳಿಸುತ್ತಿದೆ. ರಾಜ್ಯದ ವಿವಿಧೆಡೆಯ 200 ಮಠಾಧೀಶರು ದಸರಾ ಉದ್ಘಾಟನೆಗೆ ಸಾಕ್ಷಿಯಾಗುತ್ತಿರುವುದು ಈ ಸಲದ ಮತ್ತೊಂದು ವೈಶಿಷ್ಟ್ಯ. ದಸರಾದಲ್ಲಿ ಇದೇ ಮೊದಲ ಬಾರಿ ಕಂಬಳ ಪರಿಚಯಿಸಲಾಗುತ್ತಿದ್ದು, ದೇಶವಿದೇಶಗಳಿಂದ ಆಗಮಿಸುವ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯಲು ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಕುಸ್ತಿ, ಕವಿಗೋಷ್ಠಿ, ಮಹಿಳಾ ದಸರಾ, ರೈತ ದಸರಾ... ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲು ಸಜ್ಜಾಗಿದೆ.