ನರಸಾಪುರಕ್ಕೆ ಠಾಣೆ ಘೋಷಣೆ ಕೈ ಸಂಭ್ರಮಾಚರಣೆ police station 
ರಾಜ್ಯ

ನರಸಾಪುರಕ್ಕೆ ಠಾಣೆ ಘೋಷಣೆ ಕೈ ಸಂಭ್ರಮಾಚರಣೆ police station

ನರಸಾಪುರ: ಈ ಬಾರಿಯ ಬಜೆಟ್​ನಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ನರಸಾಪುರ ಪೊಲೀಸ್​ ಠಾಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಕಾಂಗ್ರೆಸ್​ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.Narasapur police station
ಕೋಲಾರ&ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ನಿರ್ದೇಶಕ, ನರಸಾಪುರ ಸೊಸೈಟಿ ಅಧ್ಯಕ್ಷ ಖಾಜಿ ಕಲ್ಲಹಳ್ಳಿ ಕೆ.ಎಂ. ಮುನಿರಾಜು ಮಾತನಾಡಿ, ನರಸಾಪುರ ಕೈಗಾರಿಕಾ ಪ್ರದೇಶವಾಗಿದ್ದು, ಹಲವು ಕಾನೂನು ಸುವ್ಯವಸ್ಥೆ ತರುವ ನಿಟ್ಟಿನಲ್ಲಿ ಹಾಗೂ ಅಪರಾಧ ಚಟುವಟಿಕೆ ತಡೆಗಟ್ಟಲು ಪೊಲೀಸ್​ ಠಾಣೆ ಅವಶ್ಯವಿತ್ತು. ಈ ಆಯವ್ಯದಲ್ಲಿ ನರಸಾಪುರದ ಕೈಗಾರಿಕಾ ವಲಯದಲ್ಲಿ ಪೊಲೀಸ್​ ಠಾಣೆ ಮಂಜೂರಾಗಿರುವುದು ಸಂತಸ ತಂದಿದೆ ಎಂದರು.
ಕಾಂಗ್ರೆಸ್​ ಅಭಿವೃದ್ಧಿ ಸಹಿಸದ ವಿರೋಧ ಪಕ್ಷದವರು ಹಣವೆಲ್ಲ ಗ್ಯಾರಂಟಿಗಳಿಗೆ ರ್ಖಚಾಗುತ್ತಿದ್ದು, ರಾಜ್ಯದಲ್ಲಿ ಪ್ರಗತಿಯೇ ಆಗುತ್ತಿಲ್ಲ ಎಂದು ಬೊಬ್ಬೆ ಹೊಡೆಯುತ್ತಿದ್ದರು. ಈಗ ಅವರ ಆರೋಪಗಳಿಗೆ ಅಭಿವೃದ್ಧಿಯೇ ಉತ್ತರವಾಗಿದೆ. ನರಸಾಪುರದಲ್ಲಿ ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ನೂತನ ಆಸ್ಪತ್ರೆ, 7 ಕೋಟಿ ರೂ. ವೆಚ್ಚದಲ್ಲಿ ದ್ವಿಪಥ ರಸ್ತೆ, 4.50 ಕೋಟಿ ರೂ. ವೆಚ್ಚದಲ್ಲಿ ಕುರ್ಕಿ ಕೆರೆ ಪ್ರಗತಿ, 1 ಕೋಟಿ ರೂ. ವೆಚ್ಚದಲ್ಲಿ ಕುರ್ಕಿಯಲ್ಲಿ ಸಿಸಿ ರಸ್ತೆ, ಖಾಜಿ ಕಲ್ಲಹಳ್ಳಿಯಿಂದ ದೊಡ್ಡಅಯ್ಯೂರು ವರೆಗೆ 5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ ಎಂದು ತಿಳಿಸಿದರು.