ರಾಜ್ಯ

ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ.

ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರ ಸಂಯುಕ್ತಾಶ್ರಯದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಭಾನುವಾರ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೂ ಮುನ್ನ ಶೋಕಾಚರಣೆ ನಡೆಸಲಾಯಿತು.
ದುಃಖದ ಈ ಸಂದರ್ಭದಲ್ಲಿ ಪೂರ್ವನಿಗದಿಯಾಗಿದ್ದ ಜಯಂತಿ ಕಾರ್ಯಕ್ರಮವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿ, ಗಣ್ಯರು ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಂಸ್ಕೃತಿಗೆ ಇಲಾಖೆ ಉಪನಿರ್ದೇಶಕ್ಕೆ ಜಗದೀಶ್ವರಿ.ಎ. ನಾಸಿ ,ರೆಡ್ಡಿ ಸಮಾಜದ ಅಧ್ಯಕ್ಷರಾದ ಡಾ. ಎಸ್.ಬಿ. ಕಾಮರೆಡ್ಡಿ, ಹೊಸಪೇಟೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರುಗಳಾದ ಶೇಖರ ಗಿರಡ್ಡಿ ಇಳಕಲ್ ಸೇರಿದಂತೆ ಸಮಾಜದ ಮುಖಂಡರಾದ ಡಾ. ವಿಶ್ವನಾಥ್ ರೆಡ್ಡಿ, ಚನ್ನಾರೆಡ್ಡಿ ಪಾಟೀಲ್, ಡಾ. ವೀರಭದ್ರಪ್ಪ ರೆಡ್ಡಿ, ಸಿದ್ದರಾಮರೆಡ್ಡಿ ಬಲ್ಕಲ್, ಬಸು ಸೂಗೂರ, ಮಹೇಶ್ ರೆಡ್ಡಿ, ಅನೂಪ ರೆಡ್ಡಿ, ವೈಭವ ರೆಡ್ಡಿ, ವೆಂಕಟ್ ರೆಡ್ಡಿ, ಮಹೇಶ ಹೊಸೂರಕರ್, ಜಿ.ಜಿ. ವಣಿಕ್ಯಾಳ, ಶೇಖರ ರೆಡ್ಡಿ, ಉಪಸ್ಥಿತರಿದ್ದರು.