ನೆಲಮಂಗಲದ ಕಾಶಿವಿಶ್ವನಾಥ ದೇಗುಲದಲ್ಲಿ ಶಾಸಕ ಎನ್​.ಶ್ರೀನಿವಾಸ್​ ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಅಧ್ಯಕ್ಷ ಎನ್​.ಗಣೇಶ್​ ಇತರರು ಭಾಗವಹಿಸಿದ್ದರು.  
ರಾಜ್ಯ

ಕಾರ್ತಿಕ ಸೋಮವಾರಕ್ಕೆ ಬೆಳಕಿನ ಸಂಭ್ರಮ / NELAMANGAL

ನೆಲಮಂಗಲ : ಕಾರ್ತಿಕ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ತಾಲೂಕಿನಾದ್ಯಂತ ವಿವಿಧ ಶಿವ ದೇಗುಲಗಳಲ್ಲಿ ವಿಶೇಷ ಪೂಜೆ, ಅಲಂಕಾರ ನೆರವೇರಿಸಲಾಯಿತು. ಸೋಮವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಶಿವಾಲಯಗಳಿಗೆ ಭೇಟಿ ನೀಡಿದ ಸಾವಿರಾರು ಭಕ್ತರು, ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಕೆಲ ದೇವಾಯಲಗಳಲ್ಲಿ ಸಮಿತಿಯಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಮಾಡಲಾಯಿತು.
ತಾಲೂಕಿನ ಪುರಾಣ ಪ್ರಸಿದ್ಧ ದಕ್ಷಿಣಕಾಶಿ ಶಿವಗಂಗೆ ಗಂಗಾಧರೇಶ್ವರ ದೇವಾಲಯ, ನಗರದ ಕಾಶಿವಿಶ್ವನಾಥ, ರುದ್ರೇಶ್ವರ, ಕವಾಡಿ ಮಠದ ಶ್ರೀ ವೀರಭದ್ರೇಶ್ವರ, ಕೆರೆಏರಿ ಹಿಂಭಾಗದ ಮಹಾಲಿಂಗೇಶ್ವರ, ಟಿ.ಬಿ.ರಸ್ತೆಯಲ್ಲಿನ ಶಿವಗಣಪತಿ ದೇವಾಲಯ ಸೇರಿ ತಾಲೂಕಿನ ಭಿನ್ನಮಂಗಲ ಐತಿಹಾಸಿಕ ಮುಕ್ತನಾಥೇಶ್ವರ ದೇವಾಲಯದಲ್ಲಿ ಕಾರ್ತಿಕ ಸೋಮವಾರ ಹಿನ್ನೆಲೆ ಆಕರ್ಷಕ ಪುಷ್ಪಾಲಂಕಾರ, ದೀಪೋತ್ಸವ ನಡೆಯಿತು.
ಹೋಮ, ರುದ್ರಾಭಿಷೇಕ : ನಗರದ ಭಿನ್ನಮಂಗಲದ ಮುಕ್ತನಾಥೇಶ್ವರ ದೇವಾಲಯದಲ್ಲಿ ಸೋಮವಾರ ಲೋಕಕಲ್ಯಾಣಾರ್ಥ ರುದ್ರಾಭಿಷೇಕ ಮತ್ತು ರುದ್ರಹೋಮ ಆಯೋಜಿಸಲಾಗಿತ್ತು.
ವಿಶೇಷ ಪೂಜೆ : ನಗರದ ಕಾಶಿವಿಶ್ವನಾಥ ದೇಗುಲದಲ್ಲಿ ಶಾಸಕ ಎನ್​.ಶ್ರೀನಿವಾಸ್​ ನೇತೃತ್ವದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ನಾಗರಾಜು, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಬ್​ ಪ್ರಸಾದ್​, ಸದಸ್ಯ ನರಸಿಂಹಮೂರ್ತಿ, ಸಿ.ಪ್ರದಿಪ್​, ಪುರುಷೋತ್ತಮ್​, ಮುಖಂಡ ಕೆ.ಕೃಷ್ಣಪ್ಪ, ಮುನಿಯಪ್ಪ, ಮುನಿರಾಜು, ಸಿ.ಎಂ.ಗೌಡ, ನಾರಾಯಣರಾವ್​, ಉಮೇಶ್​ ಇತರರು ಇದ್ದರು.
ಕಾರಪುರಿ ವಿತರಣೆ : ನಗರದ ಕೆರೆ ಏರಿ ಹಿಂಭಾಗದ ಮಹಾಲಿಂಗೇಶ್ವರ ದೇವಾಲಯ ದೇವರಿಗೆ ವಿಶೇಷ ಹೂವಿನ ಅಲಂಕಾರದ ಜತೆಗೆ ವಿಶೇಷವಾಗಿ 700 ಮೂಟೆ ಕಾರಪುರಿ ಸಿದ್ಧಪಡಿಸಿ ಭಕ್ತರಿಗೆ ವಿತರಿಸಲಾಯಿತು. ಅರ್ಚಕ ಎಸ್​.ರಘುಚಂದ್ರಶರ್ಮ, ದೇವಾಲಯ ಸಮಿತಿ ಗಣೇಶ್​, ಶಿವಮೂರ್ತಿ, ಯಜಮಾನ್​ ಉಮೇಶ್​, ನಾಗರಾಜು, ಶಿವಕುಮಾರ್​, ಮಂಜುನಾಥ್​, ಶಿವಾಜಿರಾವ್​ ಇತರರು ಇದ್ದರು.