ಕಕ್ಕೇರಿಯ ಬಿಷ್ಟಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಮಂದಿರ ಎದುರು ಕಾರ್ತಿಕ ಅಮಾವಾಸ್ಯೆ ನಿಮಿತ್ತ ದೀಪ ಹಚ್ಚಿರುವುದು.
ಕಕ್ಕೇರಿ: ಗ್ರಾಮದ ಬಿಷ್ಟಾದೇವಿ ಹಾಗೂ ಸಹೋದರಿ ಮೂಕಮ್ಮದೇವಿ ಮಂದಿರದಲ್ಲಿ ಕಾರ್ತಿಕ ಅಮಾವಾಸ್ಯೆ ನಿಮಿತ್ತ ಗುರುವಾರ ಭಕ್ತರು ದೇವರ ದರ್ಶನಾಶೀರ್ವಾದ ಪಡೆದರು. ಭಕ್ತರು ಹರಕೆ ತೀರಿಸಲು ಬಂಗಾರ, ಬೆಳ್ಳಿ, ಕಾಣಿಕೆ, ಉಡಿ ತುಂಬಿದರು. ಅಮಾವಾಸ್ಯೆ ನಿಮಿತ್ತ ಮಂದಿರದೆದುರು ಮೇಣದಬತ್ತಿ, ದೀಪ ಹಚ್ಚಲಾಗಿತ್ತು. ಭಕ್ತರು ಪ್ರಸಾದ ಹಂಚಿ ಸಂಭ್ರಮಿಸಿದರು. ಮಂದಿರದ ಎದುರು ಹೊಸ ವಾಹನಗಳ ಪೂಜೆ ನೆರವೇರಿಸಲಾಯಿತು.