ಈದ್ ಮಿಲಾದ್ ಹಬ್ಬದ ನಿಮಿತ್ತ ಸುರಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಕರೆದಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಜಾವೇದ್ ಇನಾಮದಾರ ಮಾತನಾಡಿದರು. ಪಿಐ ಉಮೇಶ ಎಂ.ನಾಯಕ ಇತರರಿದ್ದರು.
- ಡಿವೈಎಸ್‌ಪಿ ಜಾವೇದ್ ಇನಾಮದಾರ್ ಸಲಹೆ
- ಸುಪುರ ಠಾಣೆಯಲ್ಲಿ ಶಾಂತಿ ಸಭೆ
ನಗರದಲ್ಲಿ ಆ.೨೬ರಂದು ಈದ್ ಮಿಲಾದ್ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸುರಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಜಾವೇದ್ ಇನಾಮದಾರ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಶನಿವಾರ ಈದ್ ಮಿಲಾದ್ ನಿಮಿತ್ತ ಶನಿಕವಾರ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಬ್ಬದ ಅಂಗವಾಗಿ ನಡೆಯುವ ಮೆರವಣಿಗೆ ಶಾಂತಿಯುತವಾಗಿ ನಡೆಯಬೇಕು. ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮೆರವಣಿಗೆ ಹೊರಡುವ ಮಸೀದಿ ಹಾಗೂ ಮಾರ್ಗದ ಕುರಿತು ಮುಂಚಿತವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗಲಿದೆ ಎಂದು ಸೂಚಿಸಿದರು. ಪಿಐ ಉಮೇಶ ಎಂ.ನಾಯಕ ಅವರು ಹಬ್ಬದ ಶಾಂತಿಸಭೆ ಕುರಿತು ಮಾತನಾಡಿದರು.
ಈದ್ ಮಿಲಾದ್ ಹಬ್ಬದ ದಿನ ರಂಗAಪೇಟೆಯಲ್ಲಿ ಮತ್ತು ಸುರಪುರದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮುದಾಯದವರು ತಿಳಿಸಿದರು. ಮುಖಂಡರಾದ ಅಬ್ದುಲ್ ಗಫರ್ ನಗನೂರಿ, ಖಾಲೀದ್ ಅಹ್ಮದ್ ತಾಳಿಕೋಟಿ, ಚಂದ್ರಶೇಖರ ಜಡಿಮರಳ, ಶೇಖ್ ಮಹಿಬೂಬ್ ಒಂಟಿ, ಖಾಜಾ ಖಲೀಲ್ ಅಹ್ಮದ್ ಅರಕೇರಿ, ಬಾಬಾ ಸಾಹೇಬ್ ಲೈಟ್, ಶಿವಲಿಂಗ ಹಸನಾಪುರ, ಭೀಮು ನಾಯಕ ಮಲ್ಲಿಭಾವಿ, ಉಸ್ತಾದ್ ವಜಾಹತ್ ನಿಜ್ಜು, ನಾಸೀರ್ ಹುಸೇನ್ ಕುಂಡಾಲೆ, ಭೀಮರಾಯ ಕಡೇಮನಿ, ಖಾಜಾ ಅಜ್ಮೀರ್, ಎಂ.ಪಟೇಲ್, ವೆಂಕಟೇಶ ಬೇಟೆಗಾರ, ಆಬೀದ್ ಹುಸೇನ್ ಪಗಡೆ ಇತರರಿದ್ದರು.