ಸೌಹಾರ್ದದಿಂದ ಹಬ್ಬ ಆಚರಿಸಿ harmony 
ರಾಜ್ಯ

ಸೌಹಾರ್ದದಿಂದ ಹಬ್ಬ ಆಚರಿಸಿ harmony

ಗುಡಿಬಂಡೆ: ಮುಂದಿನ ಪೀಳಿಗೆಗೆ ಶಾಂತಿ, ಸೌಹಾರ್ದ ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಹೊಂದಿರುವ ಉತ್ತಮ ಸಮಾಜವನ್ನು ಕೊಡುಗೆಯಾಗಿ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಆರಕ್ಷಕ ವೃತ್ತ ನಿರೀಕ್ಷಕ ಮುನಿಕೃಷ್ಣ ತಿಳಿಸಿದರು.harmony
ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಹಿಂದೂ&ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಆಯಾ ಧರ್ಮ ಹಾಗೂ ಜಾತಿಗಳ ಮುಖಂಡರು ಆಚರಿಸುವ ಹಬ್ಬ, ಜಾತ್ರೆ ಸೇರಿ ಕಾರ್ಯಕ್ರಮಗಳ ಆಚರಣೆ ಮಾಡುವಾಗ ಪರಸ್ಪರ ಭಕ್ತಿ ಹಾಗೂ ಗೌರವದಿಂದ ಕಾಣಬೇಕು. ಪೊಲೀಸ್​ ಇಲಾಖೆಯಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುವುದು.
ಮೊಹರಂ ಸೇರಿ ಎಲ್ಲ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಹಾಗೂ ದೇವಾಲಯಗಳಲ್ಲಿ ಪೂಜೆ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಅಹಿತಕರ ಟನೆಗಳಿಗೆ ಅವಕಾಶ ನೀಡದೆ, ಪರಸ್ಪರ ಸಹಕಾರ ಮತ್ತು ಸಂಯಮದಿಂದ ಹಬ್ಬಗಳನ್ನು ಆಚರಿಸುವಂತೆ ತಮ್ಮ ವ್ಯಾಪ್ತಿಯಲ್ಲಿ ಎಲ್ಲರಿಗೂ ಮನವರಿಕೆ ಮಾಡಿಕೊಡುವಂತೆ ಮುಖಂಡರಲ್ಲಿ ಮನವಿ ಮಾಡಿದರು. ತಾಲೂಕಿನ ವಿವಿಧ ಭಾಗಗಳ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು, ಪೊಲೀಸ್​ ಠಾಣೆ ಸಿಬ್ಬಂದಿ ಇದ್ದರು.