ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಮೊಹರಂ ನಿಮಿತ್ತ ನಡೆದ ಶಾಂತಿಪಾಲನಾ ಸಭೆಯಲ್ಲಿ ಪಿಎಸ್‌ಐ ಸಿದ್ದಣ್ಣ ಯಡಹಳ್ಳಿ ಮಾತನಾಡಿದರು. ರೆಹಮಾನ್ ಯಳ್ಳಿಗುತ್ತಿ, ಮುನ್ನಾ ಮೂಗನೂರ, ಜಮೀರ್ ಮೌಲ್ವಿ, ಅಖಂಡೇಶ್ವರ ಪತ್ತಾರ, ಶ್ರೀಮಂತ ದೇಸಾಯಿ ಇತರರಿದ್ದರು.
- ಪಿಎಸ್‌ಐ ಸಿದ್ದಣ್ಣ ಯಡಹಳ್ಳಿ ಹೇಳಿಕೆ
- ಶಾಂತಿಪಾಲನಾ ಸಭೆ ಆಯೋಜನೆ
ಗುಳೇದಗುಡ್ಡ: ಭಾವೈಕ್ಯ ಮೋಹರಂ ಹಬ್ಬ ವನ್ನು ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು. ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಚರಿಸಬೇಕು ಎಂದು ಪಿಎಸ್‌ಐ ಸಿದ್ದಣ್ಣ ಯಡಹಳ್ಳಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೋಹರಂ ಹಬ್ಬದ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿರುವ ಕಲೆ ಮತ್ತು ಸಂಸ್ಕೃತಿ ಅನಾವರಣ ಮಾಡುವಂತಹ ಹಬ್ಬಗಳಲ್ಲಿ ಹಿರಿಯರು ಮತ್ತು ಯುವಕರು ಭಾಗಿಯಾಗಿ ಹಬ್ವ ಆಚರಿಸಿ ಎಂದರು. ಯಾವುದೇ ಅಹಿತಕರ ಘಟನೆ ಕಂಡು ಬಂದರೆ ನಮಗೆ ತಕ್ಷಣ ಮಾಹಿತಿ ಕೊಡಿ. ಎಲ್ಲರೂ ಸೇರಿ ಶಾಂತಿಯಿಂದ ಮೊಹರಂ ಆಚರಿಸೋಣ ಎಂದರು.
ಮುರುಡಿ ಗ್ರಾಮದ ದಳಪತಿ, ಕೋಟೆಕಲ್ ಗ್ರಾಪಂ ಮಾಜಿ ಅಧ್ಯಕ್ಷ ರೆಹಮಾನ್ ಯಳ್ಳಿಗುತ್ತಿ ಮಾತನಾಡಿದರು.
ಮುನ್ನಾ ಮೂಗನೂರ, ಜಮೀರ್ ಮೌಲ್ವಿ, ಅಖಂಡೇಶ್ವರ ಪತ್ತಾರ, ಶ್ರೀಮಂತ ದೇಸಾಯಿ, ಮಂಜುನಾಥ ಉಂಕಿ, ನಬಿಸಾಬ ಮಕಾನದಾರ, ಮಹಾಂತೇಶ ಕಡಪಟ್ಟಿ, ಸುರೇಶ ಕುರಿ, ಅಮೀನಸಾಬ ಸಾಧನಿ, ಆದಪ್ಪ ಚಿಲ್ಲಾಪೂರ, ಉಸ್ಮಾನಗಣಿ ಕಂಟ್ರಾಕ್ಟರ್, ಬಸವರಾಜ ಉಪ್ಪಾರ ಸೇರಿ ಹಳದೂರ, ಹಂಸನೂರ, ರಾಘಾಪೂರ, ಕೋಟೆಕಲ್, ಲಾಯದಗುಂದಿ ಗ್ರಾಮಸ್ಥರು ಇದ್ದರು.