ಗುರುಗುಂಟಾ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಹಟ್ಟಿಚಿನ್ನದಗಣಿ ಸಿಪಿಐ ಶಿವಾನಂದ ಸಜ್ಜನ್ ಮಾತನಾಡಿದರು. ಪ್ರಮುಖರಾದ ಅಣ್ಣಯ್ಯ, ಬಸ್ಸಣ್ಣ ಭೋವಿ, ಸೋಮನಾಥ, ಅಲಿಸಾಬ್ ಖುರೇಷಿ ಇತರರಿದ್ದರು. 
ರಾಜ್ಯ

ಸೌಹಾರ್ದದಿಂದ ಮೊಹರಂ ಆಚರಣೆ ಮಾಡಿ

JAGADEESH KUMBAR

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ಶಿವಾನಂದ ಸಜ್ಜನ್ ಹೇಳಿಕೆ
ಗುರುಗುಂಟಾ: ಮೊಹರಂ ಹಬ್ಬವನ್ನು ಸರ್ವರೂ ಭ್ರಾತೃತ್ವ ಭಾವದೊಂದಿಗೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ  ಶಾಂತಿಯಿಂದ ಆಚರಿಸಬೇಕೆಂದು ಹಟ್ಟಿಚಿನ್ನದಗಣಿ ಪೊಲೀಸ್ ಠಾಣೆ ಸಿಪಿಐ ಶಿವಾನಂದ ಸಜ್ಜನ್ ಹೇಳಿದರು. 
ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗುರುಗುಂಟಾ ಮೊಹರಂ ಖ್ಯಾತಿ ಹೊಂದಿದೆ. ಕಟ್ಟಿಗೆ ತುಂಬಿದ ಚಕ್ಕಡಿ ಬಂಡಿ ಎಳೆಯುವ ಒಂಟೆತ್ತಿನ ಖತಲ್ ರಾತ್ರಿ, ಕಿಚ್ಚು ತುಳಿಯುವ ಸಾತ್ ತಾರೀಖ್, ದಫನ್ ದಿನದಂದು ಹೆಚ್ಚಿನ ಜನರು ಸೇರುತ್ತಾರೆ. 
ಪರಸ್ಪರ ತಳ್ಳಾಟಕ್ಕೆ ಆಸ್ಪದ ನೀಡದಂತೆ ಹಾಗೂ ಜಾಗೃತಿವಹಿಸಿ ಮಾದರಿಯಾಗಿ ಹಬ್ಬ ಆಚರಿಸಬೇಕು. ಸಾರ್ವಜನಿಕ ರಕ್ಷಣೆ ಮತ್ತು ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಸದಾ ಸಿದ್ಧ್ದವಿರುತ್ತದೆ ಎಂದರು.
ಧರ್ಮಗುರು ಸೈಯದ್ ಜಾಫರ್ ಹುಸೇನ್ ಖಾಜಿ ಮಾತನಾಡಿ, ಪೀರಲು ದೇವರು ಪ್ರತಿಷ್ಠಾಪನೆಗೊಂಡು ಕೊನೆಯ ದಫನ್ ದಿನ ವರೆಗಿನ ಮೊಹರಂ ಹಬ್ಬದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ ನೀಡಿ, ಪೊಲೀಸ್ ಇಲಾಖೆ ಮಾರ್ಗಸೂಚಿಯಂತೆ ಹಬ್ಬ ಆಚರಿಸಲಾಗುವುದು ಎಂದರು. 
ಪ್ರಮುಖರಾದ ಅಣ್ಣಯ್ಯ, ಬಸ್ಸಣ್ಣ ಭೋವಿ, ಗುರುಬಸವ ಹುಬ್ಬಳ್ಳಿ, ಸೋಮನಾಥ, ಅಲಿಸಾಬ್ ಖುರೇಷಿ, ಅಮರೇಶ ಪೂಜಾರಿ, ಹುಲುಗಪ್ಪ ನಾಯಕ, ಭೀಮಣ್ಣ ಪುನೇದ್, ಎಸ್‌ಡಿಪಿಐನ ಬಬಲು, ಸೋಮಣ್ಣ ನೀರಿನೇರ್, ಅಮರೇಶ ಕೆಂಪ, ರಂಗಪ್ಪ, ಮೆಹಬೂಬ್ ಸಂತ್ರಾಸ್, ಅದಪ್ಪ ತುಮಕೂರು, ಲಚಮಣ್ಣ ಕಂಬಾರ, ಹನುಮಂತಗೌಡ, ರಂಗಪ್ಪ ಇದ್ದರು.