ಬಕ್ರೀದ್ ನಿಮಿತ್ತ ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಡಿಸಿ ರಾಹುಲ್ ಪಾಂಡ್ವೆ ಮಾತನಾಡಿದರು. ಎಸ್ಪಿ ಪೃಥ್ವಿಕ್ ಶಂಕರ್, ಎಡಿಸಿ ರಮೇಶ ಕೋಲಾರ, ವಿಶ್ವನಾಥ ಸಿರವಾರ ಇತರರಿದ್ದರು.
- ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸಲಹೆ
- ವಿವಿಧ ಸಮುದಯಗಳ ಮುಖಂಡರ ಸಭೆ
ಯಾದಗಿರಿ: ಮುಂಬರುವ ಮೇ 28ರಂದು ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಹೇಳಿದರು.
ಈ ಕುರಿತು ಡಿಸಿ ಕಚೇರಿಯಲ್ಲಿ ಕರೆದಿದ್ದ ವಿವಿಧ ಸಮುದಾಯಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಬಕ್ರೀದ್ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಎಲ್ಲ ಹಬ್ಬಗಳನ್ನು ಸರ್ವಧರ್ಮಿಯರು ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸುತ್ತಾ ಬಂದಿದ್ದು, ಬಕ್ರೀದ್ ಹಬ್ಬವೂ ಸಹ ಶಾಂತಿ ಹಾಗೂ ಸೌಹಾರ್ದಯುತವಾಗಿ ಆಚರಿಸುವಂತೆ ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನ ಮತ್ತು ಜಿಲ್ಲಾಡಳಿತದಿಂದ ನೀಡಲಾಗುವ ನಿರ್ದೇಶನ ಕಡ್ಡಾಯವಾಗಿ ಪಾಲಿಸಬೇಕು. ಸಣ್ಣ ಪುಟ್ಟ ಟನೆಗಳಿಂದ ಯುವಕರ ವಿರುದ್ಧ ಪ್ರಕರಣ ದಾಖಲಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಶಾಂತಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.
ಹಬ್ಬದ ವೇಳೆ ಅಕ್ರಮ ಗೋಹತ್ಯೆ, ಗೋ ಸಾಗಣೆ ಹಾಗೂ ಮಾರಾಟ ಮಾಡಬಾರದು. ಈ ಕುರಿತು ಮುನ್ನೆಚ್ಚರಿಕೆ ವಹಿಸಲು ತಿಳಿಸಿದ ಅವರು, ನಗರ ಸ್ಥಳಿಯ ಸಂಸ್ಥೆಗಳಿಗೆ ನತ್ಯಾಜ್ಯ ನಿರ್ವಹಣೆ, ಸ್ವಚ್ಛತೆಗೆ ಕಟ್ಟುನಿಟ್ಟಾಗಿ ಸೂಚಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿದ, ಈ ಹಿಂದೆ ಹಿಂದೂ, ಮುಸ್ಲಿಂ ಬಾಂಧವರು ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿಕೊಂಡು ಬಂದಿದ್ದು, ಈ ಸಲವೂ ಶಾಂತಿಯುತವಾಗಿ ಆಚರಿಸಬೇಕು. ಸಣ್ಣ ಪುಟ್ಟ ಟನೆಗಳು ಜೀವನ ಪೂರ್ಣ ಪ್ರಭಾವ ಬೀರುವುದರಿಂದ ಯುವಕರು ಎಚ್ಚರಿಕೆಯಿಂದಿರಬೇಕು. ಶಾಂತಿ ಕದಡಿಸುವವರ ಬಗ್ಗೆ ಪೋಲಿಸ್ ಇಲಾಖೆ ಗಮನಕ್ಕೆ ತರಬೇಕು. ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಪೋಲಿಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ ಸ್ವಾಗತಿಸಿದರು. ಸಹಾಯಕ ಆಯುಕ್ತ ಶ್ರೀಧರ ಗೋಟೂರ, ಡಿಎಸ್ಪಿ ಸುರೇಶ್, ತಂಜುಮಿನ್ ಮುಸ್ಲಿಂಮಿನ್ ಅಧ್ಯ ಇರ್ಫಾನ್ ಹುಸೇನ್ ಬಾದಲ್, ಉಪಾಧ್ಯ ವಹೀದ್ ಮಿಯಾ, ಭಾವೈಕ್ಯತೆ ಸಮಿತಿಯ ವಿಶ್ವನಾಥ ಸಿರವಾಳ, ಡಿಎಸ್ಎಸ್ ಸಂಚಾಲಕ ಭೀಮಣ್ಣ ಹೊಸಮನಿ, ಶರಣಪ್ಪ ಗುಳಿಗಿ, ಗುಲಾಮ್ ಜಿಲಾನಿ, ಸದ್ದಾಂ ಹುಸೇನ್, ಸಲೀಂ ಪಟೇಲ್ ಇತರರಿದ್ದರು.
ಈದ್ಗಾ ಪ್ರಾರ್ಥನಾ ಸ್ಥಳಗಳಲ್ಲಿ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗುವುದು. ಪ್ರತಿ ಉಪ ವಿಭಾಗಕ್ಕೆ ಈ ಬಾರಿ ಇಬ್ಬರು ಪಿಎಸ್ಐಗಳನ್ನು ನಿಯೋಜಿಸಲಾಗುವುದು. ಅಕ್ರಮ ಗೋ ಸಾಗಣೆ ತಡೆಗೆ 12 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು. ನೈತಿಕ ಪೊಲೀಸ್ಗಿರಿ ಮಾಡದೆ ಇಲಾಖೆಯೊಂದಿಗೆ ಅಗತ್ಯ ಸಹಕಾರ ನೀಡಬೇಕು.
— > ಪೃಥ್ವಿಕ್ ಶಂಕರ್ ಎಸ್ಪಿ ಯಾದಗಿರಿ