Celebrate Bakrid with harmony
ಚೇಳೂರು: ಮುಸ್ಲಿಂ ಸಮುದಾಯದವರು ಶಾಂತಿ, ಸೌಹಾರ್ದತೆಯಿಂದ ಬಕ್ರೀದ್ ಆಚರಿಸಬೇಕೆಂದು ಸಬ್ ಇನ್ಸ್ಪೆಕ್ಟರ್ ಕೆ.ಗಣೇಶ್ ಸೂಚಿಸಿದರು.
ಬಕ್ರೀದ್ ಅಂಗವಾಗಿ ತಾಲೂಕಿನ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಪ್ರತಿಯೊಬ್ಬರೂ ಸೌಹಾರ್ದತೆ ಮತ್ತು ಪರಸ್ಪರ ನಂಬಿಕೆಯಿಂದ ಬಕ್ರೀದ್ ಆಚರಿಸಬೇಕು.
ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಶಾಂತಿಯುತವಾಗಿ ಹಬ್ಬ ಆಚರಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬೇಕು. ಗೊಂದಲಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಪೊಲೀಸ್ ಇಲಾಖೆ ಗಮನಕ್ಕೆ ತರಬೇಕು ಎಂದರು.
ಪೊಲೀಸ್ ಸಿಬ್ಬಂದಿ ಸುಧಾಕರ್, ಬೀರಣ್ಣ, ಜಾಮಿಯಾ ಮಸೀದಿಯ ಅಬ್ದುಲ್ ಲತೀಫ್, ಮದೀನಾ ಮಸೀದಿಯ ಅಲೀಂ ಭಾಷಾ, ನಯಾಜ್, ಬಾಬು, ಎಂ.ಜಿ.ನವಾಜ್, ಹಿರಿಯ ಮುಖಂಡರಾದ ಅಹ್ಮದ್, ಫಕ್ರುದ್ದೀನ್,ಬಾಷ, ಶೌಕತ್ ಇದ್ದರು.