ಮಳವಳ್ಳಿ ಪಟ್ಟಣದಲ್ಲಿ ಮಂಗಳವಾರ ನಡೆದ ದಂಡಿನ ಮಾರಮ್ಮನ ದೇವಾಲಯಕ್ಕೆ ಭೇಟಿ ನೀಡಿ ಭಕ್ತರು ಪೂಜೆ ಸಲ್ಲಿಸಿದರು.
ಮಳವಳ್ಳಿ: ಪಟ್ಟಣದಲ್ಲಿ ದಂಡಿನ ಮಾರಮ್ಮನಿಗೆ ನೂರಾರು ಮಹಿಳೆಯರು ತಂಬಿಟ್ಟಿನ ಆರತಿ ನೀಡಿ ಹಬ್ಬವನ್ನು ಆಚರಿಸುವ ಮೂಲಕ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಕಂರ್ಯಗಳನ್ನು ಮಂಗಳವಾರ ಜರುಗುವುದರ ಜತೆಗೆ ಐದು ದಿನಗಳ ಕಾಲ ನಡೆಯುವ ಪಟ್ಟಲದಮ್ಮನ ಸಿಡಿ ಹಬ್ಬಕ್ಕೆ ಅಧಿಕೃತವಾಗಿ ಚಾಲನೆ ದೊರೆಯಿತು.
ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ದೊಡ್ಡಕೆರೆ ಪಕ್ಕದಲ್ಲಿರುವ ದಂಡಿನ ಮಾರಮ್ಮ ಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಬೆಳಗಿನ ಜಾವದಿಂದಲೇ ಅರ್ಚಕರ ತಂಡ ಹೋಮ ಹವನಗಳನ್ನು ನೆರವೇರಿಸುವುದರ ಜತೆಗೆ ದಂಡಿನ ಮಾರಮ್ಮ ದೇವಿಯ ವಿಗ್ರಹವವನ್ನು ವಿವಿಧ ಬಗೆಯ ಹೂ ಸೇರಿದಂತೆ ಬಂಗಾರದ ಒಡವೆಗಳಿಂದ ಅಲಂಕರಿಸಲಾಗಿತ್ತು.
ಪಟ್ಟಣ ಸೇರಿದಂತೆ ತಮ್ಮಡಹಳ್ಳಿ, ಎಂ.ಬಸವನಪುರ, ಮಾಗನೂರು, ಬುಗತಗಹಳ್ಳಿ, ಅಂಚೇದೊಡ್ಡಿ, ನಿಡಘಟ್ಟ, ತಳಗವಾದಿ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಹಬ್ಬವನ್ನು ಆಚರಿಸಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಕುಟುಂಬ ಸದಸ್ಯರೊಡನೆ ತಂಬಿಟ್ಟಿನ ಆರತಿ ಹಿಡಿದು ದೇವಸ್ಥಾನಕ್ಕೆ ಆಗಮಿಸಿ ಸರದಿಯಲ್ಲಿ ನಿಂತು ಪೂಜೆ ಸಲ್ಲಿಸುವ ಮೂಲಕ ಗ್ರಾಮ ದೇವಿಯ ದರ್ಶನ ಪಡೆದರು. ಅಲ್ಲದೆ ಜತೆಯಲ್ಲೇ ಹಿಡಿದು ತಂದಿದ್ದ ಕೋಳಿಗಳನ್ನು ದೇವಾಲಯದ ಆವರಣದಲ್ಲಿ ಕೊಯ್ದು ಹರಕೆ ತೀರಿಸಿ ಮನೆಗಳಿಗೆ ಕೊಂಡೋಯ್ಯುತ್ತಿರು ದೃಶ್ಯ ಸಮಾನ್ಯವಾಗಿತ್ತು .
ಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಲಿನ ಅಂಗಳದಲ್ಲಿ ಮಕ್ಕಳ ಆಟಿಕೆ ವಸ್ತುಗಳು ಹಾಗೂ ಪೂಜಾ ಸಾಮಗ್ರಿಗಳ ಅಂಗಡಿಗಳನ್ನು ತೆರೆದಿದ್ದ ವ್ಯಾಪಾರಿಗಳ ಬಳಿ ಖರೀದಿಸುತ್ತಿದ್ದ ದೃಶ್ಯ ಕಂಡಬಂತು.
ಜನದಟ್ಟಣೆ ಹೆಚ್ಚಿದ್ದರಿಂದ ಪೊಲೀಸರು ಸೂಕ್ತಭದ್ರತೆ ನೀಡುವುದರ ಜತೆಗೆ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಯಾವುದೆ ಅಡಚಣೆಯಾಗದಂತೆ ಕ್ರಮ ವಹಿಸಿದ್ದರು. ಪಟ್ಟಣದ ಪ್ರಮುಖ ರಸ್ತೆಗಳ ಉದ್ದಗಲಕ್ಕೂ ವಿದ್ಯುತ್ ದೀಪಾಲಂಕರ ಹಾಗೂ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.