ಪ್ರಮುಖ ಮುಖ್ಯಾಂಶಗಳು
ಚಿಕ್ಕೋಡಿಯಲ್ಲಿ ಕ್ಯಾಮರಾ ಕಣ್ಗಾವಲು
| ೨೫ ಸ್ಥಳಗಳಲ್ಲಿ ಅಳವಡಿಕೆ | ಅಪರಾಧಿಕ ಕೃತ್ಯ ತಡೆಗೆ ಕ್ರಮ
ಆನಂದ ಭಮ್ಮನ್ನವರ, ಚಿಕ್ಕೋಡಿ
ಅಪರಾಧ ಕೃತ್ಯ ತಡೆ, ಕಳ್ಳತನ, ರಸ್ತೆ ಸಂಚಾರ ನಿಯಮ ಉಲಂಘನೆಗೆ ಕಡಿವಾಣ ಹಾಕುವ ಪಟ್ಟಿ ಪಟ್ಟಣದ ವ್ಯಾಪ್ತಿಯ ಪ್ರಮುಖ 25 ಸ್ಥಳಗಳಲ್ಲಿ ಅತ್ಯಾಧುನಿಕ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು, ಪೊಲೀಸ್ ಇಲಾಖೆಗೆ ಅಪರಾಧ ಪ್ರಕರಣ ನಿಭಾಸಲು ಸುಲಭವಾದ ಸಂಗತಿ.
ಜಿಲ್ಲಾ ಸ್ಥಾನಮಾನ ಪಡೆಯುವ ಸನಿಹದಲ್ಲಿರುವ ಚಿಕ್ಕೋಡಿ ಪಟ್ಟಣ ದಿನೇ ದಿನೇ ಬೆಳೆಯುತ್ತಿದೆ. ಅಂದಾಜು 45 ಸಾವಿರ ಜನಸಂಖ್ಯೆ ಇದೆ. ಶೈಕ್ಷಣಿಕ ಜಿಲ್ಲಾ ಸ್ಥಾನವಾಗಿರುವುದರಿಂದ ಪಟ್ಟಣದಲ್ಲಿ ಸಂಘಟನಾ ಇಲಾಖೆ ಕಚೇರಿಗಳು, ಸಂಸ್ಥೆಗಳು, ಶಾಲಾ-ಕಾಲೇಜುಗಳು ಸಂಖ್ಯೆ ಹೆಚ್ಚಿದೆ. ಈ ಹೊಸ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಹಾಗೂ ಅಪರಾಧ ಕೃತ್ಯ ಪ್ರಕರಣಗಳನ್ನು ಬೇಧಿಸಲು ಸಿಸಿ ಕ್ಯಾಮರಾಗಳು ಸಹಕಾರಿಯಾಗಲಿವೆ.
ಈ ಹಿಂದೆ ಪಟ್ಟಣದಲ್ಲಿ ಹಗಲು ರಾತ್ರಿ ಎನ್ನದೇ ನಡೆದ ಕಳ್ಳತನ ಘಟನೆಯನ್ನು ಭೇದಿಸುವುದು ಪೊಲೀಸ್ ಇಲಾಖೆಗೆ ಸಿಸಿ ಕ್ಯಾಮರಾ ಕೊರತೆ ಕಾಡುತ್ತಿತ್ತು. ಸಣ್ಣ ಪುಟ್ಟ ವಿಚಾರಕ್ಕೆ ಪ್ರಮುಖ ಸ್ಥಳಗಳಲ್ಲಿ ಗಲಾಟೆ, ಹೊಡೆದಾಟದಲ್ಲಿ ಕಾಣಿಸಿಕೊಳ್ಳುವ ಪುಂಡರು ಪೊಲೀಸ್ ಕಣ್ಣಿನಿಂದ ತಪ್ಪಿಸಿಕೊಳ್ಳುವ ಸಂಭವ ಹೆಚ್ಚಾದವು. ಆದರೆ ಇನ್ನು ಮುಂದೆ ಪಟ್ಟಣದಲ್ಲಿ ತಪ್ಪು ಮಾಡಿ ಖಾಕಿ ಕಣ್ಣಿಂದ ತಪ್ಪಿಸಿಕೊಳ್ಳುವುದು ಸುಲಭವಿಲ್ಲ.
೨೫ ಸ್ಥಳಗಳಲ್ಲಿ ಕ್ಯಾಮರಾ ಕಣ್ಗಾವಲು:
ಪಟ್ಟಣದ ಪ್ರಮುಖ ಸ್ಳಳಗಳಲ್ಲಿ, ಜನನಿಬಿಡ ಮಾರುಕಟ್ಟೆ,ಮುಖ್ಯರಸ್ತೆ,ಮತ್ತು ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸಾರ್ವಜನಿಕರು ಸಂಬಂಧಿತ ಇಲಾಖೆಗೆ ಜನರ ಒತ್ತಾಯ ಈಗ ಫಲ ನೀಡಿದೆ. ಎನ್‌ಪಿಆರ್( ಸ್ವಯಂ ಚಾಲಿತ ವಾಹನದ ನಂಬರ್ ಪ್ಲೆಟ್ ಗುರುತಿಸುವಿಕೆ)-4 , ಇನ್ನುಳಿದ ಸುಧಾರಿತ 21 ಒಟ್ಟು 25 ಕ್ಯಾಮರಾ ಅಳವಡಿಸಲಾಗಿದೆ. ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಇವುಗಳ ಮೇಲೆ ನಿಗಾವಹಿಸುತ್ತಿದ್ದಾರೆ.
ಎಲ್ಲೆಲ್ಲಿ ಅಳವಡಿಕೆ:
ಇಲ್ಲಿನ ಆರ್‌ಟಿಓ ಕಚೇರಿಯ ವೃತ್ತ, ಬಸವ ವೃತ್ತ, ಬಸ್ ನಿಲ್ದಾಣ, ಝಾರಿ ಗಲ್ಲಿ, ನಿಪ್ಪಾಣಿ-ಮುಧೋಳ ರಸ್ತೆಯ ರಾಜು ನಗರ ಕ್ರಾಸ್, ನ್ಯಾಯಾಧೀಶರ ವಸತಿ ನಿವೇಶನ ಪ್ರದೇಶ, ಹೊಸಪೇಠ ಗಲ್ಲಿ, ಕೆ.ಸಿ. ರಸ್ತೆಯ ಪ್ರಭುವಾಡಿ ಕ್ರಾಸ್, ಅಂಕಲಿಖೂಟ, ಪುರಸಭೆ ಮುಂಬಾಗ, ಎಸ್‌ಸಿ ಕಚೇರಿ ಮುಂಭಾಗ, ಬುದ್ಧ ನಗರ ಸೇರಿ ಒಟ್ಟು 25 ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಇನ್ನು ಮುಂದೆ ಸಂಚಾರಿ ನಿಯಮ ಮೀರಿ ತಪ್ಪಿಸಿಕೊಳ್ಳುವವರಿಗೆ ಕ್ಯಾಮರಾ ಸಾಕ್ಷಿ ನೀಡಲಿವೆ.
ಭಾಕ್ಸ್
15 ಲಕ್ಷ .ರೂ ವೆಚ್ಚದಲ್ಲಿ ಅಳವಡಿಕೆ
ಸಂಸದೆ ಪ್ರಿಯಾಂಕ ಜಾರಕಿಹೊಳಿ ಅವರು ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ 15 ಲಕ್ಷ ರೂ.ವೆಚ್ಚದಲ್ಲಿ
ಪಟ್ಟಣದಲ್ಲಿ ಅಳವಡಿಸಿರುವ ಎಲ್ಲ ಕ್ಯಾಮರಾಗಳು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಕೊಠಡಿಯಲ್ಲಿ ಪ್ರಸಾರವಾಗಿದೆ. ಈ ಮೂಲಕ ಪಟ್ಟಣದ ಬೈಕ್ ಸವಾರರ ವೇಗ ನಿಯಂತ್ರಣ, ಕಾನೂನು ಉಲಂಘನೆಗಳನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ.
ಕೋಟ್
ಚಿಕ್ಕೋಡಿ ಪಟ್ಟಣದಲ್ಲಿ ಅತ್ಯಾಧುನಿಕ ಸಿಸಿಟಿವಿ ವ್ಯವಸ್ಥೆಯಿಂದ ಜನರ ಸುರಕ್ಷತೆ ಇನ್ನಷ್ಟು ಬಲಗೊಳ್ಳಲಿದೆ.ಸಾರ್ವಜನಿಕ ಭದ್ರತೆ ಹಾಗೂ ಶಾಂತಿ ಕಾಯ್ದುಕೊಳ್ಳುವ ಕ್ಯಾಮರಾ ಮಹತ್ವದ್ದಾಗಿದ್ದು, ಪೊಲೀಸ್ ಇಲಾಖೆಯು ಮತಷ್ಟು ಸುಧಾರಿಸಲಿದೆ.
ಪ್ರಿಯಾಂಕ ಜಾರಕಿಹೊಳಿ,ಸಂಸದೆ
ಚಿಕ್ಕೋಡಿ