ಕಕ್ಕೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಮಿತ್ತ ಕೇಂದ್ರದ ಮುಖ್ಯ ಅಧೀಕ್ಷಕ ಜ್ಞಾನದೇವ ಗೇಂಡೆ ನೇತೃತ್ವದಲ್ಲಿ ಮಂಗಳವಾರ ಶಿಕ್ಷಕರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು. ಬಸಯ್ಯ ಸ್ವಾಮಿ, ಹರೀಲಾಲ್​ ವಿಜಯಲ್ಮ ಹಿರೇಮಠ ಇತರರಿದ್ದರು. 
ರಾಜ್ಯ

ಪರೀಕ್ಷೆಗಳ ಮೇಲೆ ಸಿಸಿ ಕ್ಯಾಮರಾ ಕಣ್ಣು

ಕಕ್ಕೇರಾ: ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರವಾಗಿರುವ ಸ್ಥಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಕೇಂದ್ರದ ಮುಖ್ಯ ಅಧೀಕ್ಷಕ ಜ್ಞಾನದೇವ ಗೇಂಡೆ ಪರೀಕ್ಷೆಗೆ ನಿಯೋಜನೆಗೊಂಡ ಶಿಕ್ಷಕರೊಂದಿಗೆ ಪೂರ್ವಭಾವಿ ಸಭೆ ನಡೆಸಿದರು.
ನಂತರ ಮಾತನಾಡಿ, ಭುಧವಾರದಿಂದ ರಾಜ್ಯಾದ್ಯಂತ ಪರೀೆಗಳು ಪ್ರಾರಂಭವಾಗುತ್ತಿದ್ದು, ಪರೀೆಗೆ ನಿಯೋಜನೆಗೊಂಡ ಶಿಕ್ಷಕರು ಪರೀಾ ದಿನದಂದು ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆ ಆಗಮಿಸಬೇಕು. ಪರೀೆ ಕೇಂದ್ರದಲ್ಲಿ ವಿದ್ಯಾರ್ಥಿಗಳ ಹಾಲ್​ ಟಿಕೇಟ್​ ಹಾಗೂ ಸಿಎನ್​ಆರ್​ ಪರಿಶೀಲಿಸಬೇಕು. ಪರೀೆ ಅವಧಿ ಮುಗಿವರೆಗೂ ಯಾವುದೇ ವಿದ್ಯಾರ್ಥಿಯನ್ನು ಕೇಂದ್ರದಿಂದ ಹೊರಗೆ ಬಿಡಬಾರದು ಎಂದು ಹೇಳಿದರು.
ಪರೀಾರ್ಥಿಗಳು ಒಬ್ಬರ ಉತ್ತರ ಪತ್ರಿಕೆ ಇನ್ನೊಬ್ಬ ವಿದ್ಯಾರ್ಥಿ ನೋಡಿ ಬರೆಯಲಿಕ್ಕೆ ಅವಕಾಶ ಮಾಡಬಾರದು. ಶಿಕ್ಷಕರು ತಮ್ಮ ಮೊಬೈಲ್​ಗಳನ್ನು ಮೊಬೈಲ್​ ಸ್ವಾಧಿನಾಧಿಕಾರಿಗೆ ನೀಡಿ ಕಡ್ಡಾಯವಗಿ ರಸೀದಿ ಪಡೆಯಬೇಕು. ಎಲ್ಲೆಡೆ ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು ಹಾಗೂ ಈ ಸಲ ವೆಬ್​ ಕ್ಯಾಮರಾ ಅಳವಡಿಕೆಯಿಂದಾಗಿ ಮೇಲಧಿಕಾರಿಗಳು ತಮ್ಮ ಕಚೇರಿಯಲ್ಲಿಯೇ ಪರೀಕ್ಷೆ ಬರೆಯುವ ಕ್ರಮಗಳನ್ನು ವೀಕ್ಷಣೆ ಮಾಡಲಿದ್ದಾರೆ ಎಂದು ಹೇಳಿದರು.
ಈ ವೇಳೆ ಕೇಂದ್ರದ ಪ್ರಶ್ನೆಪತ್ರಿಕೆ ಪರಿಪಾಲಕ ಬಸಯ್ಯಸ್ವಾಮಿ, ಪರೀೆಗೆ ನಿಯೋಜನೆಗೊಂಡ ವಿಜಯಲ್ಮ ಹಿರೇಮಠ, ಬಸವರಾಜ ನೀಲಗಾರ, ಹಣಮಂತಪ್ಪ, ಅಮರೇಶ ಗುಡಗುಂಟಿ ಪರೀಕ್ಷೆಗೆ ನಿಯೋಜನೆಗೊಂಡ 10ಕ್ಕೂ ಹೆಚ್ಚು ಶಿಕ್ಷಕರು ಸಭೆಯಲ್ಲಿ ಭಾಗವಹಿಸಿದ್ದರು.