ತಾಳಿಕೋಟೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಮುಖಂಡ ಶರಣು ದೇಶಮುಖ ಚಾಲನೆ ನೀಡಿದರು. ಮುದೇಪ್ಪಗೌಡ ಹಡಲಗೇರಿ, ಜಿ.ಜಿ. ಪಾಟೀಲ, ಮತ್ತಿತರರಿದ್ದರು. 
ರಾಜ್ಯ

ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ಜನರ ಬೇಡಿಕೆಗೆ ಶಾಸಕರಿಂದ ಸ್ಪಂದನೆ
  • ಭೂಮಿ ಪೂಜೆ ಕಾರ್ಯಕ್ರಮ
ತಾಳಿಕೋಟೆ: ಕೊಣ್ಣೂರ ಗ್ರಾಮ ಮತಕ್ಷೇತ್ರದಲ್ಲಿಯೇ ದೊಡ್ಡ ಗ್ರಾಮವಾಗಿದೆ. ಗ್ರಾಮದ ಅಭಿವದ್ಧಿಗಾಗಿ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಸರ್ಕಾರದಿಂದ ವಿವಿಧ ಅನುದಾನದಡಿಯಲ್ಲಿ ಅನೇಕ ಅಭಿವದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ಬಹುದಿನಗಳ ಬೇಡಿಕೆಯಾಗಿ ಉಳಿದಿದ್ದ ರಸ್ತೆ ಕಾಮಗಾರಿಗೆ ಚಾಲನೆ ದೊರಕಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಬಸನಗೌಡ ಹಡಲಗೇರಿ ಹೇಳಿದರು.
ಮಂಗಳವಾರ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ವಿಜಯಪುರ 2025-26ನೇ ಸಾಲಿನ ಲೆಕ್ಕ ಶಿರ್ಷಿಕೆ 5054 ರಡಿ 1 ಕೋಟಿ ರೂ. ವೆಚ್ಚದಲ್ಲಿ ಎಸ್.ಸಿ.ಕಾಲನಿಯ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮುದ್ದೇಬಿಹಾಳ ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ಅನುದಾನ ಒದಗಿಸುವುದರೊಂದಿಗೆ ಜನರಿಗೆ ಅವಶ್ಯವಿರುವ ಕಾರ್ಯಗಳನ್ನು ಮಾಡು ತ್ತಿದ್ದಾರೆ. ಕೊಣ್ಣೂರ ಗ್ರಾಮದ ಕುರಿತು ವಿಶೇಷ ಕಾಳಜಿ ವಹಿಸುವುದರೊಂದಿಗೆ ರಸ್ತೆ ಅಭಿವದ್ಧಿಗೆ ಆದ್ಯತೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಯುವ ಮುಖಂಡ ಶರಣು ದೇಶಮುಖ ಮಾತನಾಡಿ, ಕ್ಷೇತ್ರದ ವಿವಿಧ ಗ್ರಾಮಗಳನ್ನು ಹೋಲಿಸಿದರೆ ಮುಖ್ಯವಾಗಿ ಕೊಣ್ಣೂರ ಗ್ರಾಮದಲ್ಲಿ ರಸ್ತೆ ಅಭಿವದ್ಧಿಗೆ ಹೆಚ್ಚಿಗೆ ಆದ್ಯತೆ ಶಾಸಕ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿಯೂ ರಸ್ತೆ ಅಭಿವದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದರು.
ಕೆ.ಆರ್.ಐ.ಡಿ.ಎಲ್.ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆನಂದ ಸ್ವಾಮಿ ಮಾತನಾಡಿ, ರಸ್ತೆಯು 5ಮೀ, ಅಗಲ ಹಾಗೂ 1 ಕಿ.ಮೀ. ಉದ್ದವಾಗಿದ್ದು 1 ಕೋಟಿ ರೂ.ವೆಚ್ಚದ ಕಾಮಗಾರಿಯಾಗಿದೆ. ಈ ರಸ್ತೆ ಎರಡೂ ಪಕ್ಕದಲ್ಲಿ ಚರಂಡಿ ಮಾಡಲು ಬೇಡಿಕೆಯಿದ್ದು, ಮುಂದಿನ ಅನುದಾನದಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಮುದೇಪ್ಪಗೌಡ ಹಡಲಗೇರಿ, ಜಿ.ಜಿ. ಪಾಟೀಲ, ಮುತ್ತುಗೌಡ ಹಿಪ್ಪರಗಿ, ಜಿ.ಜಿ.ಅಸ್ಕಿ, ಅಶೋಕಗೌಡ ಬಿರಾದಾರ, ಶಿವನಗೌಡ ಚೌಧರಿ, ಬಿ.ಸಿ.ಪಾಟೀಲ, ಸಂಗನಗೌಡ ಅಸ್ಕಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಅಬ್ದುಲ್ ರೆಹಮಾನ ಅವಟಿ, ಜಿ.ಎಸ್.ಐನಾಪೂರ, ಹುಸೇನ ವಾಲಿಕಾರ, ಸುರೇಶ ನೀರಲಗಿ, ಅಭಿಯಂತರ ಸಚೀನ ಮುಳಗಿ, ಸಾಹೇಬಗೌಡ ಬಿರಾದಾರ ಉಪಸ್ಥಿತರಿದ್ದರು.