ಸಿಸಿ ರಸ್ತೆ ಕಾಮಗಾರಿ ಅವ್ಯವಸ್ಥೆ CC road  
ರಾಜ್ಯ

ಸಿಸಿ ರಸ್ತೆ ಕಾಮಗಾರಿ ಅವ್ಯವಸ್ಥೆ CC road

ಬಂಗಾರಪೇಟೆ: ನಗರದ ಕಾರೋನೇಷನ್​ ರಸ್ತೆಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿಯ ಗುಣಮಟ್ಟ ಕುರಿತು ಸಾರ್ವಜನಿಕವಾಗಿ ಆರೋಪಗಳು ಕೇಳಿ ಬಂದಿವೆ.CC road
ಓಸ್ವಾಲ್​ ನರ್ಸಿಂಗ್​ ಹೋಂನಿಂದ ಕಾರಹಳ್ಳಿ ವೃತ್ತದವರೆಗೆ ಗುಣಮಟ್ಟದ ಕಾಮಗಾರಿ ನಡೆಸಿ ಸಿಮೆಂಟ್​ ರಸ್ತೆಯಾಗಿ ರೂಪಾಂತರಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ ಕಾರಹಳ್ಳಿ ವೃತ್ತದಿಂದ ಬಸ್​ ನಿಲ್ದಾಣದ ವೃತ್ತದವರೆಗೆ ಆರಂಭಿಕ ಹಂತದಲ್ಲಿ ಕೈಗೊಂಡ ಚರಂಡಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಈ ಭಾಗದಲ್ಲಿ ಈಗಾಗಲೇ ಚರಂಡಿ ದುರಸ್ತಿ ಕಾರ್ಯ ನಡೆದಿದ್ದು, ಅದರ ಮೇಲ್ಭಾಗದಲ್ಲಿ ಸ್ಲಾ$್ಯಬ್​ ಅಳವಡಿಸಿ ಕಾಂಕ್ರಿಟ್​ ಹಾಕಬೇಕಾಗಿತ್ತು. ಆದರೆ ಕಾಂಕ್ರಿಟ್​ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ಹೊಸ ಚರಂಡಿಯೊಳಗೆ ತ್ಯಾಜ್ಯ ತುಂಬಿಕೊಂಡಿದೆ. ಕಾಮಗಾರಿ ಶ್ರೀ ಮುಗಿಸುವ ಭರದಲ್ಲಿ ಗುತ್ತಿಗೆದಾರರು ತ್ಯಾಜ್ಯ ತೆರವುಗೊಳಿಸದೆ ನೇರವಾಗಿ ಕಾಂಕ್ರಿಟ್​ ಹಾಕಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದರ ಪರಿಣಾಮ ಚರಂಡಿ ನೀರು ಮುಂದೆ ಹರಿಯದೇ ಅದೇ ಸ್ಥಳದಲ್ಲಿ ನಿಂತುಕೊಳ್ಳುತ್ತಿದ್ದು, ಸ್ಥಳಿಯರಿಗೆ ತೀವ್ರ ತೊಂದರೆ ಉಂಟಾಗಿದೆ. ಮಳೆ ಬಂದರೆ ಸಮಸ್ಯೆ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ.
ಈ ವಿಷಯ ನಗರಸಭೆ ಅಧಿಕಾರಿಗಳ ಗಮನಕ್ಕೂ ಬಂದಂತೆ ಕಾಣುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ, ಚರಂಡಿ ಕಾಮಗಾರಿ ಯಾವ ರೀತಿಯಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಲಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮಗಾರಿ ಗುಣಮಟ್ಟ ಹಾಗೂ ಚರಂಡಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಕುರಿತು ನಗರಸಭೆ ತಣ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳಿಯರು ಒತ್ತಾಯಿಸಿದ್ದಾರೆ.