ಒಳಚರಂಡಿ ಯೋಜನೆ ಜಾರಿಗೆ ಬೇಕಾದ ಅನುದಾನ ಹಾಗೂ ನಗರಕ್ಕೆ ಕಾವೇರಿ ನೀರು ಹಂಚಿಕೆಗೆ ಸರ್ಕಾರ ಒಪ್ಪಿಗೆ ನೀಡಿದ್ದ ಹಿನ್ನೆಲೆಯಲ್ಲಿ ನೆಲಮಂಗಲದ ತಾಲೂಕು ಕಚೇರಿ ಆವರಣದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು. ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ನಗರಸಭೆ ಉಪಾಧ್ಯಕ್ಷ ಆನಂದ್, ಸದಸ್ಯ ನರಸಿಂಹಮೂರ್ತಿ, ಪುರುಷೋತ್ತಮ್, ಲೋಲಾಗಂಗಾಧರ್, ಸುಧಾಕೃಷ್ಣಪ್ಪ, ಭಾರತಿಬಾಯಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ನಾಗರಾಜು ಇದ್ದರು.
ನೆಲಮಂಗಲ : ಬಜೆಟ್ನಲ್ಲಿ ನಗರಕ್ಕೆ ಒಳಚರಂಡಿ ಯೋಜನೆ ಜಾರಿಗೆ ಅನುದಾನ ಹಾಗೂ 6ನೇ ಹಂತದ ಕಾವೇರಿ ನೀರು ಹಂಚಿಕೆಗೆ ಬಜೆಟ್ಗೂ ಮುನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವ ಕಾರಣ ಸೋಮವಾರ ಬೆಳಗ್ಗೆ ತಾಲೂಕು ಕಚೇರಿ ಬಳಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪ್ರದಿಪ್ ಮಾತನಾಡಿ, ನಗರದಲ್ಲಿ ನನೆಗುದಿಗೆ ಬಿದ್ದಿದ್ದ ಒಳಚರಂಡಿ ಯೋಜನೆ ಕನಸು ನನಸಾಗಿದೆ. ಕಾವೇರಿ ನೀರು ಪೂರೈಕೆ ಮೂಲಕ ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದು, ಚುನಾವಣಾ ಪೂರ್ವದಲ್ಲಿ ನಗರದ ನಾಗರಿಕರಿಗೆ ನೀಡಿದ ಭರವಸೆ ಈಡೇರಿದಂತಾಗಿದೆ. ವಿರೋಧ ಪಕ್ಷದವರ ಆರೋಪ ಟೀಕೆಗಳಿಗೆ ಜನ ಪೂರ್ಣವಿರಾಮ ಹಾಕಲಿದ್ದಾರೆ ಎಂದರು.
ನಗರಸಭೆ ಅಧ್ಯಕ್ಷ ಎನ್.ಗಣೇಶ್ ಮಾತನಾಡಿ, ನಗರದ ಒಳಚರಂಡಿ ಯೋಜನೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುತ್ತಿದೆ ಎಂದರು. ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ನಾಗರಾಜು ಮಾತನಾಡಿ, ಶಾಸಕರ ದೂರದೃಷ್ಟಿ ಯೋಜನೆಗಳ ಕುರಿತಾಗಿ ಪಕ್ಷದ ಕಾರ್ಯಕರ್ತರು, ಮುಖಂಡರು ಜನರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ನೆ.ಯೋ.ಮಾಜಿ ಅಧ್ಯಕ್ಷ ಎನ್.ಪಿ. ಹೇಮಂತ್ಕುಮಾರ್, ಮಾಜಿ ಸದಸ್ಯ ಬಿ.ಜಿ.ವಾಸು, ಪ್ರಕಾಶ್ಬಾಬು, ಮುಖಂಡ ಮಿಲಿಟರಿಮೂರ್ತಿ, ಚಂದ್ರಕುಮಾರ್, ಮುನಿರಾಜು, ಲ್ಮನಾರಾಯಣ್, ರಾಜಣ್ಣ, ಚಿಕ್ಕಹನುಮೇಗೌಡ, ಸಿಎಂಗೌಡ, ವಕೀಲ ವಿಜಯ್, ಹನುಮಂತಮ್ಮ, ರಾಜೇಶ್ವರಿ ಮತ್ತಿತರರು ಇದ್ದರು.