Cauvery river  
ರಾಜ್ಯ

ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶಕ್ಕೆ ಸಾಹಿತಿ, ಹೋರಾಟಗಾರರ ವಿರೋಧ

ಪ್ರಮುಖ ಮುಖ್ಯಾಂಶಗಳು

  • * ಆದೇಶಕ್ಕೆ ತಲೆ ಬಾಗದೆ ಎಚ್ಚರ ವಹಿಸಲು ಸರ್ಕಾರಕ್ಕೆ ಒತ್ತಾಯ
ಬೆಂಗಳೂರು: ತಮಿಳುನಾಡಿಗೆ 4 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣ ಮಂಡಳಿಯ ಅದೇಶ ಅವೈಜ್ಞಾನಿಕವಾಗಿದೆ ಎಂದು ಖಂಡಿಸಿರುವ ಸಾಹಿತಿಗಳು, ಕನ್ನಡಪರ ಹೋರಾಟಗಾರರು ನೀರು ಹರಿಸದೆ ರಾಜ್ಯದ ಹಿತ ಕಾಪಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಜುಲೈ ಮುಗಿಯುತ್ತ ಬಂದಿದ್ದರೂ ಕಾವೇರಿ ಜಲಾನಯದ ಯಾವ ಜಲಾಶಯವೂ ತುಂಬಿಲ್ಲ. ಇದರಿಂದಾಗಿ ಕಾವೇರಿ ನೀರನ್ನೇ ನೆಚ್ಚಿಕೊಂಡಿರುವ ಬೆಂಗಳೂರು, ಮಂಡ್ಯ, ಮೈಸೂರು, ತುಮಕೂರು ಮುಂತಾದ ನಗರಗಳ ನಾಗರಿಕರು ಮಳೆಗಾದಲ್ಲೇ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇನ್ನು ರೈತರ ಕಬ್ಬು- ಭತ್ತದ ಬೆಳೆಗಳು ಒಣಗುತ್ತಿರುವ ಭೀಕರ ಪರಿಸ್ಥಿತಿಯ ಅರಿವಿದ್ದರೂ ಮಂಡಳಿಯು ಹೀಗೆ ಶಿಾರಸು ಮಾಡಿರುವುದು ರಾಜ್ಯದ ಪಾಲಿಗೆ ಮಾರಕವಾಗಿದೆ. ವಾಸ್ತವ ಸ್ಥಿತಿಯ ಪೂರ್ವಾಪರ ಅಧ್ಯಯನ ಮಾಡದೆ ಹೀಗೆ ಆದೇಶ ನೀಡುವುದು ಏಕಪಕ್ಷೀಯ ನಡೆಯಾಗಿದೆ ಎಂದು ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ಪ್ರಮುಖರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕಾವೇರಿ ನೀರು ನಿಯಂತ್ರಣ ಮಂಡಳಿಯ ಆದೇಶಕ್ಕೆ ಮಾನ್ಯತೆ ನೀಡಬಾರದು. ಇಂಥದೊಂದು ಆದೇಶ ಮಾಡುವ ಮಂಡಳಿ ವಿರುದ್ಧ ಸರ್ಕಾರ ಮೇಲ್ಮನವಿ ಸಲ್ಲಿಸುವ ಮೂಲಕ ರಾಜ್ಯದ ಹಿತ ಕಾಪಾಡಬೇಕಿದೆ. ಸಮೃದ್ಧ ಮಳೆ ಸುರಿದು ರಾಜ್ಯದ ಜಲಾಶಯಗಳು ತುಂಬಿದಲ್ಲಿ ನೆರೆಯ ರಾಜ್ಯಕ್ಕೆ ನೀರು ಹರಿಸಬಹುದೇ ಹೊರತಾಗಿ ಈ ಹೊತ್ತಿನ ಈ ಆದೇಶಕ್ಕೆ ತಲೆ ಬಾಗದೆ ಎಚ್ಚರ ವಹಿಸಬೇಕೆಂದು ಸಮಿತಿಯ ಎಲ್ಲ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.