ಹೊಳೆನರಸೀಪುರ ಪಟ್ಟಣದ ಎಲ್‌ಐಸಿ ಶಾಖಾ ಕಚೇರಿಯಲ್ಲಿ ನಿಗಮದ 70ನೇ ವಾರ್ಷಿಕೋತ್ಸವ ಆಚರಿಸಲಾಯಿತು. ಶ್ರೀಧರ್, ಅರುಣ್ ಕುಮಾರ್, ಶಿವಪ್ರಕಾಶ್, ಅರವಿಂದ್, ಮಹೇಶ್, ಗೌತಮ್, ಉದಯ ಲಕ್ಷ್ಮಿ ಇತರರು ಇದ್ದರು.
ಹೊಳೆನರಸೀಪುರ: ಭಾರತೀಯ ಜೀವ ವಿಮಾ ನಿಗಮ ವಿಶ್ವದಲ್ಲೇ ಎರಡನೇ ಸ್ಥಾನ ಅಲಂಕರಿಸಿ ವಿಮಾ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ ಎಂದು ಹಿರಿಯ ಶಾಖಾಧಿಕಾರಿ ಶ್ರೀಧರ್ ಹೇಳಿದರು.
ಪಟ್ಟಣದ ಎಲ್‌ಐಸಿ ಶಾಖಾ ಕಚೇರಿಯಲ್ಲಿ ಮಂಗಳವಾರ ನಿಗಮದ 70ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಭಾರತೀಯರಿಗೆ ವಿಮೆ ನೀಡುವ ಮೂಲಕ ನಿಗಮವು ಪಾಲಿಸಿದಾರರಿಗೆ ಹಾಗೂ ಕುಟುಂಬದವರಿಗೆ ರಕ್ಷಣೆ ನೀಡುವುದರ ಜತೆಗೆ ಆರ್ಥಿಕ ಭದ್ರತೆ ಒದಗಿಸುತ್ತಿದೆ ಎಂದರು.
ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುವ ಹಲವು ಕಂಪನಿಗಳು ಹಣ ದುರ್ಬಳಕೆ ಮಾಡಿಕೊಂಡು ಬಾಗಿಲು ಮುಚ್ಚಿಕೊಂಡು ಹೋಗಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಹಣ ಹೂಡುವಾಗ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಎಲ್‌ಐಸಿಯ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರ ಶ್ರಮದಿಂದ ಇಂದು ಜೀವ ವಿಮಾ ನಿಗಮ ಎತ್ತರಕ್ಕೆ ಬೆಳೆಯುತ್ತಾ ಸಾರ್ವಜನಿಕರ ಸೇವೆಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದರು. ಸೆಪ್ಟೆಂಬರ್ 1 ರಿಂದ 7 ದಿನಗಳ ಕಾಲ ಶಾಖೆಯಲ್ಲಿ ವಿಮಾ ಸಪ್ತಾಹ ಕಾರ್ಯಕ್ರಮ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪಾಲಿಸಿದಾರರಾದ ಮಂಜುಳಾ, ಹಿರಿಯ ಅಭಿವೃದ್ಧಿ ಅಧಿಕಾರಿ ಶಿವಪ್ರಕಾಶ್, ಉದಯ ಲಕ್ಷ್ಮಿ, ಪ್ರತಿನಿಧಿಗಳಾದ ಎ.ಪಾಲಾಕ್ಷ , ಡಿ.ಬಿ.ದೇವರಾಜೇಗೌಡ ಮಾತನಾಡಿದರು. ಶಾಖೆಗೆ ಮೊದಲು ಆಗಮಿಸಿದ ಪಾಲಿಸಿದಾರ ಬಾಗಿವಾಳು ಯೋಗೇಶ್ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಸಿಹಿ ವಿತರಿಸಲಾಯಿತು. ಸಿಬ್ಬಂದಿ ಗೌತಮ್, ಮಮತಾ, ವೀಣಾ ಸಾಯಿ ಪ್ರಕಾಶ್, ಮಾದೇವಯ್ಯ, ಅಭಿವೃದ್ಧಿ ಅಧಿಕಾರಿಗಳಾದ ಟಿ.ಪಿ.ಅರವಿಂದ್, ಮಹೇಶ್, ನಾಗಪ್ರಸಾದ್ ಶ್ರೀಕಾಂತ್, ಪ್ರತಿನಿಧಿಗಳಾದ ಎಲ್.ಎನ್.ಚಂದ್ರಶೇಖರ್, ಪಿ.ದಿಲೀಪ್ ಕುಮಾರ್, ಕುಬೇರ, ಎಂ.ಡಿ. ದೇವರಾಜೇಗೌಡ ಇತರರು ಇದ್ದರು. ಉಪ ಶಾಖಾಧಿಕಾರಿ ಬಿ.ಆರ್.ಅರುಣ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.