ಶಹಾಬಾದ್: ದನ-ಕರುಗಳು ರೈಲ್ವೆ ನಿಲ್ದಾಣದ ಪ್ಲಾಟ್ಫಾಮ್ರ್ ಮೇಲೆ ತಿರುಗಾಡಿ ಕೆಲಕಾಲ ಪ್ರಯಾಣಿಕರನ್ನು ಪರದಾಡುವಂತೆ ಮಾಡಿದ ಪ್ರಸಂಗ ನಗರದ ರೈಲು ನಿಲ್ದಾಣದಲ್ಲಿ ಶನಿವಾರ ನಡೆಯಿತು. ಮಧ್ಯಾಹ್ನ ಕೋನಾರ್ಕ್ ಹೊರತುಪಡಿಸಿ ಯಾವುದೇ ಪ್ರಯಾಣಿಕ ರೈಲು ಸಂಚರಿಸುವುದಿಲ್ಲ. ಇದರಿಂದ ಜನರ ಓಡಾಟವೂ ಕಡಿಮೆ. ಈ ವೇಳೆ 8&10 ದನಗಳು ನಿಲ್ದಾಣ ಹೊಕ್ಕಿ ರಾಜಾರೋಷವಾಗಿ ಪ್ಲಾಟ್ಫಾಮ್ರ್ ಮೇಲೆ ತಿರುಗಾಡುತ್ತಿದ್ದವು. ಗೂಡ್ಸ್ ಗಾಡಿಗಳು ನಿರಂತರ ಓಡಾಡುತ್ತಿರುತ್ತವೆ. ಈ ರೀತಿ ಪ್ಲಾಟ್ಫಾಮ್ರ್ ಮೇಲೆ ಬಂದ ದನಗಳು ರೈಲಿನ ಶಬ್ದಕ್ಕೆ ಹೆದರಿ ಹಳಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡರೆ ಯಾರು ಜವಾಬ್ದಾರರು? ಈಗಾಗಲೇ ರೈಲ್ವೆ ಇಲಾಖೆ ಹಳಿ ಉದ್ದಕ್ಕೂ ಎರಡು ಬದಿಯಲ್ಲಿ ದನಗಳು ಬಾರದಂತೆ ಕಬ್ಬಿಣದ ಪಟ್ಟಿ ಬ್ಯಾರಿಕೇಡ್ ನಿರ್ಮಿಸಿದ್ದರಿಂದ ಹಳಿಯಲ್ಲಿ ಸಿಲುಕಿ ಸಾಯುವುದು ಕಡಿಮೆಯಾಗಿದೆ. ಆದರೀಗ ನಿಲ್ದಾಣದ ಸಿಬ್ಬಂದಿ, ಅಧಿಕಾರಿಗಳ ರ್ನಿಲಕ್ಷದಿಂದಾಗಿ ನೇರವಾಗಿ ಸ್ಟೇಷನ್ನಲ್ಲಿ ತಿರುಗಾಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.