ಬಾವಿಗೆ ಬಿದ್ದ ಬೆಕ್ಕು ರಕ್ಷಣೆ
- ಬಾವಿಗೆ ಬಿದಿದ್ದ ಬೆಕ್ಕು ರಕ್ಷಣೆ
- ಚಿಕ್ಕೋಡಿ ಪಟ್ಟಣದಲ್ಲಿ ಘಟನೆ
- ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಣೆ
ಬಾವಿಗೆ ಬಿದಿದ್ದ ಬೆಕ್ಕು ರಕ್ಷಣೆ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ಪಟ್ಟಣದ ಇಂದಿರಾನಗರದಲ್ಲಿ ಶುಕ್ರವಾರ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಬೆಕ್ಕೊಂದನ್ನು ಇಲ್ಲಿನ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣದ ಇಂದಿರಾನಗರದ ರಾಜೇಂದ್ರ ನಿರಲೆ ಎಂಬುವವರ ಬಾವಿಗೆ ಬೆಕ್ಕು ಬಿದ್ದಿತ್ತು. ಇದನ್ನು ಗಮನಿಸಿದ ಮಾಲೀಕರು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸುಮಾರು ೪೦ ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಅನುರಾಗ ಬಿ ಎಲ್, ದುಂಡಪ್ಪ ಬಾಡಕರ, ಕಂಟೆಪ್ಪ ಮಾಳಗಿ , ಲಕ್ಷ್ಮಣ ಸಾವಳಗಿ. ವಿನೋದ್ ನಿಕ್ಕಮ್,ಬಾಬು ಗೌರಜ್ , ಬಸವರಾಜ ಸದಲಗಿ, ಬಸವರಾಜ ಹಿರೇಗೌಡ್ರ, ಬಸವರಾಜ್ ಕಾಂಬಳೆ ಕಾರ್ಯಾಚರಣೆಯಲ್ಲಿ ಇದ್ದರು.