Case registered against person who assaulted a police officer.
ಚಿಂತಾಮಣಿ: ಕರ್ತವ್ಯನಿರತ ಹೊಯ್ಸಳ&112 ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಗೋಪಾಲಕೃಷ್ಣ ಎಂಬಾತನ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.25ರಂದು ರಾತ್ರಿ ಸೊಣ್ಣಶೆಟ್ಟಿಹಳ್ಳಿಯಲ್ಲಿ ಗಲಾಟೆ ನಡೆಯುತ್ತಿದೆ ಎಂದು ಬಂದ ಮಾಹಿತಿ ಮೇರೆಗೆ ಹೆಡ್ ಕಾನ್ಸ್ಟೇಬಲ್ ಜಿ.ರಾಮಾಂಜನೇಯ ಹಾಗೂ ಎ.ಆರ್.ಎಸ್.ಐ ವೆಂಕಟರೆಡ್ಡಿ ಸ್ಥಳಕ್ಕೆ ತೆರಳಿದ್ದರು
ಪೊಲೀಸರು ದೂರುದಾರ ಅರವಿಂದ್ ಅವರನ್ನು ವಿಚಾರಿಸಿದಾಗ ಅವರ ಮಾವ ಗೋಪಾಲಕೃಷ್ಣನೇ ಗಲಾಟೆ ನಡೆಸಿ ಚಾಕುವಿನಿಂದ ಚುಚ್ಚುವುದಾಗಿ ಬೆದರಿಕೆ ಹಾಕಿರುವುದಾಗಿ ತಿಳಿಸಿದರು. ಪೊಲೀಸರು ಗೋಪಾಲಕೃಷ್ಣ ಅವರನ್ನು ಪ್ರಶ್ನಿಸಿದಾಗ ಪೊಲೀಸರೊಂದಿಗೆ ವಾಗ್ವಾದ ನಡೆಸಿ ನಿಂದಿಸಿದ್ದಲ್ಲದೆ ರಾಮಾಂಜನೇಯ ಅವರ ಕಾಲರ್ ಹಿಡಿದು ಎಳೆದಾಡಿ ಹಲ್ಲೆ ಮಾಡಿದ ಎಂದು ಆಪಾದಿಸಲಾಗಿದೆ.
ತಡೆಯಲು ಬಂದ ಎ.ಆರ್.ಎಸ್.ಐ ವೆಂಕಟರೆಡ್ಡಿ ಮೇಲೆಯೂ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದು, ಗಾಯಗೊಂಡ ಇಬ್ಬರೂ ಪೊಲೀಸರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.