ವಡಗೇರಾ ತಾಲೂಕಿನ ಗುರಸಣಗಿ ಸಿದ್ಧಲಿಂಗೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆವರೆಗೆ 2 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಡಿಗಲ್ಲು ನೆರವೇರಿಸಿದರು. ಮಲ್ಲಿಕಾರ್ಜುನಸ್ವಾಮಿ ಹೊಸಮಠ, ರಮೇಶ ರಾಠೋಡ, ಸಿದ್ದಣ್ಣಗೌಡ ಹಿರೇಗೌಡ, ಶರಣಭೂಪಾಲರಡ್ಡಿ, ಮಲ್ಲಿಕಾರ್ಜುನರಡ್ಡಿ ಗೋಸ್ವಾಮಿ ನಾಯ್ಕಲ್, ಬಸರಾಜಪ್ಪಗೌಡ ಶಾಂತವೀರ, ಖಾಜಾಮೈನುದ್ದೀನ್ ಮಿರ್ಚಿ, ಶಿವರಾಜಪ್ಪಗೌಡ, ಗುತ್ತಿಗೆದಾರ ಶಿವಬಸವರಡ್ಡಿ ನಾಯ್ಕಲ್ ಇತರರಿದ್ದರು.
- ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಸೂಚನೆ
- 2 ಕೋಟಿ ರೂ. ವೆಚ್ಚದ ಸಿಸಿ ರಸ್ತೆಗೆ ಅಡಿಗಲ್ಲು
ವಡಗೇರಾ: ಯಾದಗಿರಿ ಮತೇತ್ರದಲ್ಲಿ ಕೈಗೊಳ್ಳುವ ಪ್ರತಿಯೊಂದು ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ತಾಲೂಕಿನ ಗುರಸಣಗಿ ಸಿದ್ದಲಿಂಗೇಶ್ವರ ದೇವಸ್ಥಾನದಿಂದ ಮುಖ್ಯರಸ್ತೆಯವರೆಗೆ 2 ಕೋಟಿ ರೂ. ವೆಚ್ಚದಲ್ಲಿ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಮಂಗಳವಾರ ಅಡಿಗಲ್ಲು ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಕಾಮಗಾರಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದಿಂದ ಕೆಲಸ ಮಾಡಿದಾಗ ಮಾತ್ರ ಅದು ಹಲವಾರು ವರ್ಷಗಳ ಕಾಲ ಜನರಿಗೆ ಅನುಕೂಲವಾಗಲಿದೆ ಹೀಗಾಗಿ ತಾವು ಮಾಡುವ ಕೆಲಸ ಗುಣಮಟ್ಟದ್ದಾಗಿರಲಿ ಎಂದು ಸೂಚನೆ ನೀಡಿದರು.
ಈ ಸ್ಥಳದಲ್ಲಿ ಹಲವು ಮಠಾಧೀಶರು ಶ್ರಾವಣ ಮಾಸದಲ್ಲಿ ಅನುಷ್ಠಾನ ಕೈಗೊಂಡು ಆಧ್ಯಾತ್ಮೀಕ ಶಕ್ತಿ ಪಡೆದಿದ್ದಾರೆ, ಇದು ಭಾವೈಕ್ಯತೆಯ ೇತ್ರವಾಗಿದೆ. ಇಲ್ಲಿಗೆ ಹಿಂದುಗಳು ಹಾಗೂ ಮುಸ್ಲಿಂ ಸಮುದಾಯದವರು ಸಹಸ್ರಾರು ಸಂಖ್ಯೆಯಲ್ಲಿ ಭೇಟಿ ನೀಡಿ, ಬೆಟ್ಟದ ಮೇಲಿರುವ ಸಿದ್ಧಲಿಂಗೇಶ್ವರ ಹಾಗೂ ಕೆಳಗಿರುವ ಸೂಫಿ ಸಂತ ಚಂದಾ ಹುಸೇನಿ ದರ್ಗಾ ದರ್ಶನ ಪಡೆದು ಪುನೀತರಾಗುತ್ತಾರೆ ಎಂದು ಎಂದರು.
ಮುಂಬರುವ ದಿನಗಳಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ನಾನು ಹಂತ&ಹಂತವಾಗಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿ, ನಿಮ್ಮೇಲ್ಲರ ಸಹಕಾರದಿಂದ ಹೊಸ ಕಾಯಕಲ್ಪ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ದೇವಸ್ಥಾನದ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ಹೊಸಮಠ ಮಾತನಾಡಿ, ಈ ದೇವಸ್ಥಾನಕ್ಕೆ ಭಕ್ತರೆ ನಿಜವಾದ ಆಸ್ತಿಯಾಗಿದ್ದಾರೆ, ದೇವಸ್ಥಾನದ ರಕ್ಷಣೆಗೆ ತಡೆಗೋಡೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ, ಆ ಕಾಮಗಾರಿ ಮಳೆಗಾಲದೊಳಗೆ ಮುಗಿಸಲು ಶಾಸಕರು ಅನುದಾನ ನೀಡಬೇಕು ಮನವಿ ಮಾಡಿದರು.
ಲೋಕೋಪಯೋಗಿ ಇಂಜಿನಿಯರ್ ರಮೇಶ ರಾಠೋಡ ಪ್ರಾಸ್ತಾವಿಕ ಮಾತನಾಡಿ, ಕಾಮಗಾರಿ ಮಾಹಿತಿ ನೀಡಿದರು. ವೇದಿಕೆ ಮೇಲೆ ಸಿದ್ದಣ್ಣಗೌಡ ಹಿರೇಗೌಡ, ಶರಣಭೂಪಾಲರಡ್ಡಿ, ಮಲ್ಲಿಕಾರ್ಜುನರಡ್ಡಿ ಗೋಸ್ವಾಮಿ ನಾಯ್ಕಲ್, ಬಸರಾಜಪ್ಪಗೌಡ ಶಾಂತವೀರ, ಖಾಜಾಮೈನುದ್ದೀನ್ ಮಿರ್ಚಿ ನಾಯ್ಕಲ್, ಶಿವರಾಜಪ್ಪಗೌಡ, ಗುತ್ತಿಗೆದಾರ ಶಿವಬಸವರಡ್ಡಿ ನಾಯ್ಕಲ್, ಶರಣಗೌಡ ಹಿರೇಗೌಡ,ಮಲ್ಲಿಕಾರ್ಜುನ ಸ್ವಾಮಿ,ಭಾಗಣ್ಣ, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೂಗೂರೆಡ್ಡಿ ಬೆಂಡೆಬೆಂಬಳಿ, ಸಹಾಯಕ ಇಂಜಿನಿಯರ ದೇವದಾಸ ಇತರರಿದ್ದರು.
ಶಿಕ್ಷಕ ಚಂದ್ರಾಯಗೌಡ ನಿರೂಪಿಸಿ, ಸ್ವಾಗತಿಸಿದರು, ಸಿದ್ದಲಿಂಗಯ್ಯಸ್ವಾಮಿ ವಂದಿಸಿದರು.